ಮೈಸೂರು-ಚಾಮರಾಜನಗರ ಪರಿಷತ್ ಚುನಾವಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: 393 ಮತಗಟ್ಟೆಗಳ ಸ್ಥಾಪನೆ.

ಮೈಸೂರು,ಡಿಸೆಂಬರ್,9,2021(www.justkannada.in):  ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಮತದಾನ ನಾಳೆ ನಡೆಯಲಿದ್ದು  ಮೈಸೂರು-ಚಾಮರಾಜನಗರ ಕ್ಷೇತ್ರದ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಒಟ್ಟು 393 ಮತಗಟ್ಟೆಗಳ ಸ್ಥಾಪನೆ(ಮೈಸೂರು-259, ಚಾಮರಾಜನಗರ-134) ಮಾಡಲಾಗಿದ್ದು, ಮತದಾನ ಕಾರ್ಯಕ್ಕೆ 1809 ಸಿಬ್ಬಂದಿ ಬಳಕೆ ಮಾಡಲಾಗುತ್ತಿದೆ. ಇಂದು ಚುನಾವಣಾ ಮಸ್ಟರಿಂಗ್ ಕಾರ್ಯ ನಡೆಯಲಿದೆ.  ನಂಜನಗೂಡು, ಟಿ.ನರಸೀಪುರ, ಹುಣಸೂರು, ಪಿರಿಯಾಪಟ್ಟಣ, ಹೆಚ್.ಡಿ.ಕೋಟೆ, ಸರಗೂರು, ಕೆ.ಆರ್.ನಗರ, ಮೈಸೂರು ಸೇರಿ ಆಯಾ ತಾಲ್ಲೂಕು ಕಚೇರಿಗಳಲ್ಲಿ ಮಸ್ಟರಿಂಗ್ ಕಾರ್ಯ ನಡೆಯಲಿದೆ.countdown-grama-panchayath-voting-counting-prepared-mysore-district

ಜಿಲ್ಲೆಯಲ್ಲಿ ಈಗಾಗಲೇ144 ಸೆಕ್ಷನ್ ಜಾರಿ ಮಾಡಲಾಗಿದ್ದು, ಮದ್ಯಮಾರಾಟ, ಸಂತೆ-ಜಾತ್ರೆಗೆ ನಿರ್ಬಂಧ ವಿಧಿಸಲಾಗಿದೆ. ಶಾಂತಿಯುತ ಮತದಾನಕ್ಕಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಮೈಸೂರಿನ ಪಡುವಾರಹಳ್ಳಿಯ ಮಹಾರಾಣಿ‌ ಕಾಲೇಜಿನಲ್ಲಿ  ಸ್ಟ್ರಾಂಗ್ ರೂಂ ನಿರ್ಮಾಣ ಮಾಡಲಾಗಿದೆ. ನಾಳೆ ಪರಿಷತ್  25 ಸ್ಥಾನಗಳಿಗೆ ಮತದಾನ ನಡೆಯಲಿದ್ದು ಡಿಸೆಂಬರ್ 14ಕ್ಕೆ ಫಲಿತಾಂಶ ಹೊರಬೀಳಲಿದೆ.

Key words: Mysore-Chamarajanagar-legislative council- election – 393 booths.

ENGLISH SUMMARY…

District Administration all set for Mysuru-Chamarajanagara MLC election: 393 voting booths established
Mysuru, December 9, 2021 (www.justkannada.in): The District Administration is all set for the Mysuru-Chamarajanagara legislative council elections to be held tomorrow.countdown-grama-panchayath-voting-counting-prepared-mysore-district
About 393 booths have been established (Mysuru-259, Ch’Nagar-134), and 1809 persons have been put on duty. The election mustering will be held today. The mustering works will be held at Nanjangud, T.Narasipura, Hunsur, Periyapatna, H.D. Kote, Sarguru, K.R. Nagar, Mysuru taluk offices.
Sec. 144 has been implemented across the district, and also sale of alcohol, and conducting fairs and public programs have been restricted. Police bandobast has been made for smooth conduct of the voting. A strong room has been built at the Maharani College in Paduvarahalli, Mysuru. Voting for 25 constituencies will be held tomorrow and the results will be announced on December 14.
Keywords: LC election/ Mysuru-Chamarajanagara/ District administration/ all set