ತಾಂಬೂಲ ಪ್ರಶ್ನೆಯಂತ ಕೃತ್ಯ ಖಂಡಿಸುತ್ತೇನೆ: ಭವಿಷ್ಯ ಹೇಳುವವರನ್ನ ಬಂಧಿಸಬೇಕು ಎಂದ ಡಿ.ಕೆ ಶಿವಕುಮಾರ್.

ಬೆಂಗಳೂರು,ಮೇ,25,2022(www.justkannada.in):  ಮಂಗಳೂರಿನ ಮಳಲಿ ಮಸೀದಿಯಲ್ಲಿ ದೇವರು ಇರುವುದು ನಿಜ: ಪೂರ್ವದಲ್ಲಿ ಇದೊಂದು ಮಠದ ರೂಪದಲ್ಲಿ ಇತ್ತು. ಇಲ್ಲಿದ್ದ ದೇವಸ್ಥಾನ ಯಾವುದೋ ವಿವಾದದಿಂದ ನಾಶವಾಗಿದೆ ಎಂದು ತಾಂಬೂಲ ಪ್ರಶ್ನೆಯಲ್ಲಿ ಹೇಳಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಡಿ.ಕೆ ಶಿವಕುಮಾರ್, ತಾಂಬೂಲ ಪ್ರಶ್ನೆಯಂತ ಕೃತ್ಯವನ್ನ ಖಂಡಿಸುತ್ತೇನೆ.  ಭವಿಷ್ಯ ಹೇಳುವವರನ್ನ ಬಂಧಿಸಬೇಕು.  ಖಾಸಗಿಯಾಗಿ ಅವರು ಏನಾದರೂ ಮಾಡಲಿ.  ಅವರ ಮನೆಯಲ್ಲಿ ಏನ್ ಬೇಕಾದರೂ ಮಾಡಿಕೊಳ್ಳಲಿ. ಸರ್ಕಾರದಲ್ಲಿ ಧಾರ್ಮಿಕ  ದತ್ತಿ, ಹಜ್ ಇಲಾಖೆ ಇದೆ. ಭಾವನಾತ್ಮಕ ವಿಚಾರ ಮನೆಯಲ್ಲಿಟ್ಟಿಕೊಳ್ಳಬೇಕು ಎಂದು ಹೇಳಿದ್ದಾರೆ.

Key words:  condemn –tambula question-kpcc president-DK Shivakumar