ಮಕ್ಕಳು ಮತ್ತು ಮಹಿಳೆಯರ ಮೇಲಿನ ಶೋಷಣೆ ಖಂಡಿಸಿ ಪ್ರಾಯಶ್ಚಿತ್ತ ಹಾಗೂ ನಿರಾಹಾರ ದಿವಸ: ಮೌನ ಪ್ರತಿಭಟನೆ…

ಮೈಸೂರು,ಅಕ್ಟೋಬರ್,8,2020(www.justkannada.in):  ದೇಶದಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲಿನ ಶೋಷಣೆ ಖಂಡಿಸಿ ಒಡನಾಡಿ ಸೇವಾ ಸಂಸ್ಥೆ ವತಿಯಿಂದ ಪ್ರಾಯಶ್ಚಿತ್ತ ಹಾಗೂ ನಿರಾಹಾರ ದಿವಸ ಹೆಸರಿನಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು.jk-logo-justkannada-logo

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ  ಒಡನಾಡಿ ಸೇವಾ ಸಂಸ್ಥೆಯಿಂದ ಪ್ರಾಯಶ್ಚಿತ್ತ ಹಾಗೂ ನಿರಾಹಾರ ದಿವಸ ಹೆಸರಿನಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ, ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಅತ್ಯಾಚಾರಗಳು ದೇಶದ ಸಂವಿಧಾನ ಮೌಲ್ಯಗಳಿಗೆ ವಿರುದ್ಧವಾಗಿವೆ. ಮಾನಿಷಾಳ ಸಾವು ದಿಗ್ಭ್ರಮೆ ಉಂಟು ಮಾಡಿದೆ. ಯು.ಪಿ ಸರ್ಕಾರ ಕಾನೂನನ್ನು ಗೌರವಿಸುತ್ತಿಲ್ಲ. ಇದಕ್ಕೆ ಮಧ್ಯರಾತ್ರಿ ಮನಿಷಾಳ ದೇಹ ಸುಟ್ಟಿದ್ದೇ ನಿದರ್ಶನ. ಇಂತಹ ದುಷ್ಕೃತ್ಯಗಳನ್ನು ಒಡಾನಾಡಿ ಸಂಸ್ಥೆ ಖಂಡಿಸುತ್ತದೆ ಎಂದು ಕಿಡಿಕಾರಿದರು.condemn-exploitation-children-women-mysore-odanadi-organization

ಕಾನೂನನ್ನು ಹೊರತುಪಡಿಸಿ ಜನರಿಗೆ ಒಂದು ಸಾತ್ವಿಕ ತಿಳುವಳಿಕೆ ಬರಬೇಕು. ಇಂತಹ ಕೃತ್ಯಗಳು ನಡೆಯದಂತೆ ಸರ್ಕಾರ ಇನ್ನಾದರೂ ಕ್ರಮ ತೆಗೆದುಕೊಳ್ಳಬೇಕು  ಎಂದು ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ಹೇಳಿದರು.

Key words: Condemn -exploitation -children – women-mysore-odanadi organization