ಥಾರ್ ಎಸ್ಯುವಿ ಕಾರ್ ನೀಡಿದ ಆನಂದ್ ಮಹೇಂದ್ರಗೆ ರಿಟರ್ನ್ ಗಿಫ್ಟ್ ನೀಡಿದ ನಟರಾಜನ್

ಬೆಂಗಳೂರು, ಏಪ್ರಿಲ್ 02, 2020 (www.justkannada.in): ಆಸ್ಟ್ರೇಲಿಯಾನೆಲದಲ್ಲೇ 2-1ರಅಂತರದಲ್ಲಿಟೆಸ್ಟ್ಸರಣಿಗೆದ್ದುಐತಿಹಾಸಿಕಸಾಧನೆಮಾಡಿದ್ದ ತಂಡದಲ್ಲಿದ್ದ ಕ್ರಿಕೆಟಿಗ ನಟರಾಜನ್ ಗೆ ಮಹಿಂದ್ರಾ ಗ್ರುಪ್ ಚೇರ್ಮನ್ ಆನಂದ್ ಮಹಿಂದ್ರಾ  ಥಾರ್ ಎಸ್ಯುವಿ ಕಾರ್ ಅನ್ನ ಉಡುಗೊರೆಯಾಗಿ ನೀಡಿದ್ದಾರೆ.

ಎಸ್ಯುವಿ ಕಾರ್ನೊಂದಿಗೆ ಫೋಸ್ ನೀಡಿರುವ ನಟರಾಜನ್, ಆನಂದ್ ಮಹಿಂದ್ರಾಗೆ ಕೃತಜ್ಞತೆಗಳನ್ನ ತಿಳಿಸಿದ್ದಾರೆ. ಗಾಬ್ಬಾ ಟೆಸ್ಟ್ ಪಂದ್ಯದಲ್ಲಿ ತಾವು ಧರಿಸಿದ ಟೀಮ್ ಇಂಡಿಯಾ ಜೆರ್ಸಿ ಮೇಲೆ ಸಹಿ ಮಾಡಿ, ಆನಂದ್ ಮಹಿಂದ್ರಾ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.

ನಾನು ಸುಂದರವಾಗಿರುವ ಮಹಿಂದ್ರಾ ಥಾರ್ ಕಾರ್ ಅನ್ನು ಓಡಿಸಿದೆ. ನನ್ನ ಪ್ರಯಾಣವನ್ನು ಗುರುತಿಸಿ, ನೀವು ನೀಡಿರುವ ಉಡುಗೊರೆಗೆ ನಾನು ಕೃತಜ್ಞನಾಗಿದ್ದೇನೆ. ಸರ್ ಇದು ನೀವು ಕ್ರಿಕೆಟ್ ಮೇಲಿನ ಪ್ರೀತಿಯಿಂದ ನೀಡಿದ್ದೀರಿ ಎಂದು ನಾನು ನಂಬುತ್ತೇನೆ. ಹೀಗಾಗಿ ನಾನು ಗಬ್ಬಾ ಟೆಸ್ಟ್ ಪಂದ್ಯದಲ್ಲಿ ಧರಿಸಿದ್ದ ಜೆರ್ಸಿ ಮೇಲೆ ನನ್ನ ಸಹಿ ಹಾಕಿ ಕಳುಹಿಸಿಕೊಟ್ಟಿದ್ದೇನೆ. ಅರ್ಥಪೂರ್ಣವಾಗಿ ಅಂದುಕೊಳ್ಳುತ್ತೇನೆ ಎಂದು ಟಿ. ನಟರಾಜನ್ ಪತ್ರ ಬರೆದಿದ್ದಾರೆ.