ಬಿಎಸ್ ವೈಗೆ ಸಂಪೂರ್ಣ ಬ್ಲಾಕ್ ಮೇಲ್  : ರಾಜ್ಯದಲ್ಲಿ ಇಂದು ಇರೋದು ಬಿಜೆಪಿ ಸರ್ಕಾರವಲ್ಲ- ಯತ್ನಾಳ್ ಮತ್ತೆ ಗುಡುಗು…

Promotion

ವಿಜಯಪುರ,ಏಪ್ರಿಲ್,5,2021(www.justkannada.in) : ಸಿಎಂ ಬಿಎಸ್ ಯಡಿಯೂರಪ್ಪರನ್ನ ಸಂಪೂರ್ಣ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಈ ಮೂಲಕ ಸಿಎಂ ಕುಟುಂಬದವರೇ ರಾಜ್ಯವನ್ನು ಆಳುತ್ತಿದ್ದಾರೆ. ರಾಜ್ಯದಲ್ಲಿ ಇರೋದು ಬಿಜೆಪಿ ಸರ್ಕಾರ ಅಲ್ಲ. ಬಿಎಸ್ ವೈ ಅವರ ಕುಟುಂಬದ ಸರ್ಕಾರವಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ಮತ್ತೆ ಗುಡುಗಿದ್ದಾರೆ.Illegally,Sand,carrying,Truck,Seized,arrest,driver

ವಿಜಯಪುರದಲ್ಲಿ ಇಂದು ಮಾಧ್ಯಮಗಳಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,  ಬಹಳಷ್ಟು ಜನರ ಸಿಡಿ ಇಟ್ಕೊಂಡಿದ್ದಾರೆ. ಮುರುಗೇಶ್ ನಿರಾಣಿ, ಡಿ.ಕೆ ಶಿವಕುಮಾರ್, ವಿಜಯೇಂದ್ರ ಅಂಥವರು ಸಿಡಿ ಇಟ್ಕೊಂಡಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪರನ್ನ ಸಂಪೂರ್ಣ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಇಂದು ಇರೋದು ಬಿಜೆಪಿ ಸರ್ಕಾರವಲ್ಲ. ಬಿಎಸ್ ವೈ ಕುಟುಂಬದವರ ಸರ್ಕಾರ ಎಂದು ಕಿಡಿಕಾರಿದರು.

 Complete- block mail –CM BS Yeddyurappa-MLA-basanagowda patil Yatnal
ಕೃಪೆ-internet

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯತ್ನಾಳ್, ಎಸ್ ಐಟಿ ತನಿಖೆ ಬೇಡ. ಸಿಬಿಐಗೆ ವಹಿಸಿ ಎಂದು ಆಗಲೇ ಹೇಳಿದ್ದೆ ಎಂದರು.

ಚಿತ್ರತಾರೆಯರು  ದೊಡ್ಡವರೋ  ಜನರು ದೊಡ್ಡವರೋ..?

ಇನ್ನು ಕೋವಿಡ್ ವಿಚಾರದಲ್ಲಿ ಸರಿಯಾದ ನಿರ್ಣಯ ಕೈಗೊಳ್ಳುತ್ತಿಲ್ಲ. ಚಿತ್ರಮಂದಿರಗಳಿಗೆ ಶೇ.100ರಷ್ಟು ಭರ್ತಿಗೆ ಅವಕಾಶ ನೀಡಲಾಗಿದೆ. ಆದರೆ ಮದುವೆ ಸಮಾರಂಭಕ್ಕೆ ಏಕೆ ತೊಂದರೆ…? ಪುನೀತ್ ರಾಜ್ ಕುಮಾರ್ ಹೇಳಿದ ತಕ್ಷಣ ಅನುಮತಿ ನೀಡಿದಿರಿ. ಚಿತ್ರತಾರೆಯರು  ದೊಡ್ಡವರೋ  ಜನರು ದೊಡ್ಡವರೋ..? ಎಂದು ಪ್ರಶ್ನಿಸಿದರು.

Key words: Complete- block mail –CM BS Yeddyurappa-MLA-basanagowda patil Yatnal