ಡಿ.31ರ ಕರ್ನಾಟಕ ಬಂದ್ ಗೆ ನಟ ಶಿವರಾಜ್ ಕುಮಾರ್ ಬೇಸರ.

ಮೈಸೂರು,ಡಿಸೆಂಬರ್,25,2021(www.justkannada.in):  ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿ ಪುಂಡಾಟ ಮೆರೆದಿದ್ದ ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ಕ್ಕೆ ಕರೆ ನೀಡಿರುವ ಕರ್ನಾಟಕ ಬಂದ್ ಗೆ ನಟ ಶಿವರಾಜ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ನಟ ಶಿವರಾಜ್ ಕುಮಾರ್, ಸಮಸ್ಯೆಯನ್ನ ಬುದ್ಧಿವಂತಿಕೆಯಿಂದ ಬಗೆಹರಿಸಬೇಕು. ಸಮಸ್ಯೆ ಪರಿಹಾರಕ್ಕೆ ಜವಾಬ್ದಾರಿ ಇರುವ ಜನರಿದ್ದಾರೆ. ಡಿಸೆಂಬರ್ 31 ಕರ್ನಾಟಕ ಬಂದ್ ಬೇಸರದ ವಿಚಾರ. ಡಿ.31ಕ್ಕೆ ಮೂರು ಕನ್ನಡ ಸಿನಿಮಾಗಳು ತೆರೆ ಕಾಣಲಿವೆ. ಈ ಸಮಯದಲ್ಲಿ ಬಂದ್ ಗೆ ಕರೆ ನೀಡಿದ್ದು ಬೇಸರ.

ನಮ್ಮಿಂದಲೇ ಕನ್ನಡಕ್ಕೆ ದ್ರೋಹ ಆಗಬಾರದು ಎಂದು ಮೈಸೂರಿನಲ್ಲಿ ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.

Key words: mysore-Actor -Shivraj Kumar- – Karnataka Bandh- Dec.31.