ಮಹಾರಾಷ್ಟ್ರ ಕನ್ನಡಿಗರ ರಕ್ಷಣೆಗೆ  ನಾವು ಬದ್ಧ- ಸಿಎಂ ಬಸವರಾಜ ಬೊಮ್ಮಾಯಿ.

Promotion

ಬೆಂಗಳೂರು,ಡಿಸೆಂಬರ್,6,2022(www.justkannada.in):  ಗಡಿ ವಿವಾದ ಸುಪ್ರೀಂಕೋರ್ಟ್ ನಲ್ಲಿದೆ. ಮಹಾರಾಷ್ಟ್ರ ಕನ್ನಡಿಗರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬಹಳ ವರ್ಷ ಗಳಿಂದಲೂ ಮಹಾರಾಷ್ಟ್ರ ವಿವಾದ ಮಾಡಿಕೊಂಡು ಬಂದಿದ್ದಾರೆ. ಚುನಾವಣೆ ದೃಷ್ಠಿಯಿಂದ ವಿವಾದ ಎಬ್ಬಿಸುತ್ತಿಲ್ಲ.   ಎರಡು ರಾಜ್ಯದ ಜನರ ನಡುವೆ ಸಾಮರಸ್ಯವಿದೆ.  ಸುಪ್ರೀಂನಲ್ಲೂ ನಮ್ಮ ಪರ ತೀರ್ಪು ಬರುವ ವಿಶ್ವಾಸವಿದೆ ಎಂದು ತಿಳಿಸಿದರು.

ಗುಜರಾತ್ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಎಕ್ಸಿಟ್ ಪೋಲ್ ನಲ್ಲಿ ಬಿಜೆಪಿ ಮುಂದು ವಿಚಾರಕ್ಕೆ  ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಜನ ಅಭಿವೃದ್ದಿ ಕಾರ್ಯವನ್ನ ಬೆಂಬಲಿಸಲಿದ್ದಾರೆ. ಎರಡು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ.  ಕರ್ನಾಟಕದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words: committed – protection – Maharashtra –Kannadigas- CM Basavaraja Bommai