ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ರದ್ದು:  ಎಲ್ಲವೂ ಶಾಂತವಾಗಿದೆ ಎಂದ ಗೃಹ ಸಚಿವ ಅರಗ ಜ್ಞಾನೇಂದ್ರ.

ಬೆಂಗಳೂರು,ಡಿಸೆಂಬರ್,6,2022(www.justkannada.in): ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ರದ್ಧಾಗಿದ್ದು ಸದ್ಯ ಬೆಳಗಾವಿಯಲ್ಲಿ ಎಲ್ಲವೂ ಶಾಂತವಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ,, ಸದ್ಯ ಬೆಳಗಾವಿ ಪರಿಸ್ಥಿತಿ ಶಾಂತವಾಗಿದೆ.  ಯಾವುದೇ ಸಮಸ್ಯೆ ಇಲ್ಲ.  ಎಲ್ಲವೂ ಶಾಂತವಾಗಿದೆ. ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ರದ್ಧಾಗಿದೆ.  ಮಹಾರಾಷ್ಟ್ರ ಸರ್ಕಾರದ ಜೊತೆ ಸಿಎಂ ಬೊಮ್ಮಾಯಿ ಮಾತನಾಡಿದ್ದಾರೆ. ಮಹಾರಾಷ್ಟ್ರ ಸರ್ಕಾರ ಸ್ಪಂದನೆ ಮಾಡಿದೆ ಎಂದು ತಿಳಿಸಿದರು.

ಈ ನಡುವೆ ಎಂಇಎಸ್ ಪುಂಡಾಟಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಧಾರವಾಡದಿಂದ ಬೆಳಗಾವಿಯವರೆಗೆ ಬೃಹತ್ ರ್ಯಾಲಿ  ನಡೆಸುತ್ತಿದ್ದು ರ್ಯಾಲಿ ತಡೆಯಲು ಪೊಲೀಸ್ ಇಲಾಖೆ ಸಜ್ಜಾಗಿದೆ.

Key words: Belgaum – everything –calm- Home Minister- Araga Jnanendra