Sunday, October 18, 2026

Dasara Wishes

Happy Dasara
Home Front Page ರೊನಾಲ್ಡೊ ಮಾಡಿದ ಚಿಕ್ಕ ಸನ್ನೆ ಕೊಕಾಕೋಲಾಗೆ ತಂದಿಟ್ಟ ನಷ್ಟ 29 ಸಾವಿರ ಕೋಟಿ!

ರೊನಾಲ್ಡೊ ಮಾಡಿದ ಚಿಕ್ಕ ಸನ್ನೆ ಕೊಕಾಕೋಲಾಗೆ ತಂದಿಟ್ಟ ನಷ್ಟ 29 ಸಾವಿರ ಕೋಟಿ!

ಬೆಂಗಳೂರು, ಜೂನ್ 17, 2021 (www.justkannada.in): ಕೊಕಾಕೋಲಾ ಸಂಸ್ಥೆ ರೊನಾಲ್ಡೊರಿಂದ ಸಾವಿರಾರು ಕೋಟಿ ನಷ್ಟ ಅನುಭವಿಸಿದೆ!

ಹೌದು. ರೊನಾಲ್ಡೊ ಮಾಡಿದ ಸನ್ನೆಯೊಂದು ಕೊಕಾಕೋಲಾ ಸಂಸ್ಥೆಗೆ ಸಾವಿರಾರು ಕೋಟಿ ರೂ. ನಷ್ಟ ತಂದಿಟ್ಟಿದೆ.

ಪೋರ್ಚುಗಲ್ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಪತ್ರಿಕಾಗೋಷ್ಠಿ ಮುಗಿಯುವಷ್ಟರಲ್ಲಿ ಕಂಪನಿಯ 1 ಷೇರಿನ ಬೆಲೆ 56.10 ಡಾಲರ್ ನಿಂದ 55.22 ಡಾಲರ್ ಗೆ ಕುಸಿದಿದೆ.

ರೊನಾಲ್ಡೊರ ಈ ಕೆಲಸ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರ್ಬೋನೇಟ್ ಅಂಶವಿರುವ ಪಾನೀಯಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದಕ್ಕಾಗಿಯೇ ರೊನಾಲ್ಡೋ ಈ ರೀತಿ ಸನ್ನೆ ಮಾಡಿದ್ದರು.