ಅನ್’ಲಾಕ್! ಜುಲೈ 27ಕ್ಕೆ ಅಕ್ಷಯ್ ಕುಮಾರ್ ‘ಬೆಲ್ ಬಾಟಮ್’ ರಿಲೀಸ್

ಬೆಂಗಳೂರು, ಜೂನ್ 17, 2021 (www.justkannada.in): ಅಕ್ಷಯ್​ ಕುಮಾರ್​ ಬೆಲ್​ ಬಾಟಮ್​ ರಿಲೀಸ್​ ಡೇಟ್​​ ಫಿಕ್ಸ್​ ಆಗಿದೆ.

ಅನ್​ಲಾಕ್​ ಪ್ರಕ್ರಿಯೆ ಆರಂಭವಾದ ಖುಷಿಯಲ್ಲಿ ಅಕ್ಷಯ್​ ಕುಮಾರ್ ತಮ್ಮ ಸಿನಿಮಾ ರಿಲೀಸ್​ ಡೇಟ್ ಅನೌನ್ಸ್​ ಮಾಡಿದ್ದಾರೆ.

ಬೆಲ್​ಬಾಟಂ ಚಿತ್ರವನ್ನ ಜುಲೈ 27 ರಂದು ರಿಲೀಸ್ ಮಾಡೋಕ್ಕೆ ಚಿತ್ರತಂಡ ನಿರ್ಧರಿಸಿದೆ. ಇದೀಗ ಬಿಗ್​ ಸ್ಕ್ರೀನ್​ನಲ್ಲಿ ಬರೋ ನಿರ್ಧರಿಸಲಾಗಿದೆ. ಈ ವಿಚಾರವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ.

ಚಿತ್ರದಲ್ಲಿ ಅಕ್ಷಯ್​ ಕುಮಾರ್ ರಾ ಏಜೆಂಟ್​ ಪಾತ್ರದಲ್ಲಿ, ರೆಟ್ರೋ ಲುಕ್​ನಲ್ಲಿ ಮಿಂಚಿದ್ದಾರೆ. ವಾಣಿ ಕಪೂರ್ ನಾಯಕಿಯಾಗಿದ್ದು,​ ರಂಜಿತ್​ ತಿವಾರಿ ನಿರ್ದೇಶನ ಮಾಡಿದ್ದಾರೆ.