ಮದುವೆ ಬಳಿಕ ಮತ್ತೆ ಸಮಾಜ ಸೇವಾ ಕಾರ್ಯಕ್ಕಿಳಿದ ಪ್ರಣಿತಾ

ಬೆಂಗಳೂರು, ಜೂನ್ 17, 2021 (www.justkannada.in): ನಟಿ ಪ್ರಣಿತಾ ಸುಭಾಷ್ ತಮ್ಮ ಮದುವೆ ಕಾರ್ಯಗಳ ಮೂಲಕ ಮತ್ತೆ ಸಮಾಜ ಸೇವೆಗೆ ಧುಮುಕಿದ್ದಾರೆ.

ತಮ್ಮ ಫೌಂಡೇಶನ್ ಮೂಲಕ ನಿರಂತರವಾಗಿ ಸಮಾಜಮುಖಿ ಕೆಲಸವನ್ನು ಪುನಾರಂಭ ಮಾಡಿದ್ದಾರೆ.  ಕೋವಿಡ್ ಸಂಕಷ್ಟದಲ್ಲಿ ದಿನಸಿ ಕಿಟ್, ಆಹಾರ ಪೊಟ್ಟಣಗಳನ್ನು ನೀಡುತ್ತಿದ್ದರು.

ಇತ್ತೀಚಿಗೆ ತಮ್ಮ ಮದುವೆ ಬಳಿಕ ಮತ್ತೆ ಸೇವಾ ಕಾರ್ಯಗಳನ್ನು ಪುನಾರಂಭಿಸಿದ್ದಾರೆ. ಜತೆಗೆ ಬೆಂಗಳೂರಿನ ಜಯನಗರದಲ್ಲಿ ಪ್ರಣಿತಾ ಫೌಂಡೇಶನ್ ವತಿಯಿಂದ ಉಚಿತ ಕೋವಿಡ್ ಲಸಿಕೆ ಶಿಬಿರ ಆಯೋಜಿಸಿದ್ದಾರೆ.

ರಾಷ್ಟ್ರೋತ್ಥಾನ ಪರಿಷತ್ ಜೊತೆ ಕೈ ಜೋಡಿಸಿದ ಪ್ರಣಿತಾ ಫೌಂಡೇಶನ್ ಸಾರ್ವಜನಿಕರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಿದೆ. Pranitha is back in social service after marriage