ಸ್ವಚ್ಛ ನಗರಿ ಪಟ್ಟಕ್ಕೆ ಸಹಕರಿಸಿ: ಮೈಸೂರು ಮೇಯರ್, ಪಾಲಿಕೆ ಆಯುಕ್ತರ ಮನವಿ

ಮೈಸೂರು, ಜನವರಿ 04, 2019 (www.justkannada.in):ಜನವರಿ ೪ ರಿಂದ ೩೧ ರ ವರೆಗೆ ನಡೆಯುವ ಸ್ವಚ್ಚ ಸರ್ವೇಕ್ಷಣ್ ಹಿನ್ನೆಲೆ. ಮೈಸೂರು ಮಹಾ ನಗರ ಪಾಲಿಕೆ ವತಿಯಿಂದ ಮಾಧ್ಯಮ ಸಂವಾದ ಕಾರ್ಯಕ್ರಮ ನಡೆಯಿತು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಸ್ವಚ್ಚ ಸರ್ವೇಕ್ಷಣೆ ಸಮೀಕ್ಷೆಯ ಬಗ್ಗೆ ಪಾಲಿಕೆ ಆರೋಗ್ಯಾಧಿಕಾರಿ ನಾಗರಾಜ್ ಮಾಹಿತಿ ನೀಡಿದರು. ಮೇಯರ್ ಪುಷ್ಬಲತಾ ಜಗನ್ನಾಥ್, ಉಪ ಮೇಯರ್ ಶಫಿ ಅಮಹದ್, ಆಯುಕ್ತ ಗುರುದತ್ ಹೆಗ್ಡೆ ಉಪಸ್ಥಿತರಿದ್ದರು.

ಕಳೆದ ಬಾರಿ ಸ್ಟಾರ್ 5 ರ್ಯಾಂಕಿಂಗ್ ಸ್ಥಾನ ಪಡೆದಿದ್ದ ಮೈಸೂರು ನಗರ. ಈ ಬಾರಿ ಸ್ಟಾರ್ 2 ರ್ಯಾಂಕಿಂಗ್ ಗೆ ಪಾಲಿಕೆ ಸಿದ್ದತೆ ನಡೆಸಿದೆ. ಕೇಂದ್ರದ ಸ್ವಚ್ಚ ಸರ್ವೇಕ್ಷಣ ತಂಡಕ್ಕೆ ಮಾಹಿತಿ ನೀಡಲು ಪಾಲಿಕೆ ಸಜ್ಜಾಗಿದ್ದು, ಹೆಚ್ಚು ಅಂಕಗಳಿಸಲು ಸ್ವಚ್ಚ ನಗರಿ ಪಟ್ಟಕ್ಕೆ ಪಾಲಿಕೆ ಸಿದ್ಧತೆ ನಡೆದಿದೆ.

ಸಿಟಿಜನ್ ಫೀಡ್ ಬ್ಯಾಕ್ ನಲ್ಲಿ ಕಳೆದ ಬಾರಿ ಹಿನ್ನಡೆಯಾಗಿದ್ದ ಹಿನ್ನೆಲೆಯಲ್ಲಿ ಈ ಬಾರಿ ಸಿಟಿಜನ್ ಫೀಡ್ ಬ್ಯಾಕ್ ಮೂಲಕ ಹೆಚ್ಚು ಅಂಕ ಗಳಿಸಲು ಸಹಾಯ ಮಾಡಿ ಎಂದು ಪಾಲಿಕೆ ವತಿಯಿಂದ ಸಾರ್ವಜನಿಕ ಸಹಕಾರ ಕೋರಲಾಯಿತು. ೧೯೬೯ ಗೆ ಕರೆ ಮಾಡುವ ಮೂಲಕ ಅನ್ ಲೈನ್ ವೋಟಿಂಗ್ ಅಥವಾ ಸ್ವಚ್ಚತಾ ಅಪ್ ಬಳಸಿ ವೋಟ್ ಮಾಡುವಂತೆ ಮನವಿ ಮಾಡಲಾಯಿತು.

ನಗರ ಪಾಲಿಕೆ ಆಯುಕ್ತರ ಮಾತು:

– ನಾನು ಮೈಸೂರು ಪಾಲಿಕೆಯ ಆಯುಕ್ತನಾಗಿದ್ದೇನೆ ಅಂತ ನಾನು ಹೇಳ್ತಿಲ್ಲ. ನಾನು ನಮ್ಮ ಟ್ರೈನಿಂಗ್ ಅವಧಿಯಲ್ಲಿ ದೇಶದ ಅನೇಕ ನಗರಗಳಲ್ಲಿ ಸುತ್ತಿದ್ದೇನೆ. 11ತಿಂಗಳು ನೀವು ನಮ್ಮ ಜತೆ ಸ್ವಚ್ಚತಾ ವಿಚಾರದಲ್ಲಿ ಜಗಳ ಮಾಡಿ ನಾವು ಸ್ವೀಕರಿಸುತ್ತೇವೆ.

ಆದರೆ ಜನವರಿ ತಿಂಗಳು ಮಾತ್ರ ನಮ್ಮ ಜತೆಯಿದ್ದು ಉತ್ತಮ ಫೀಡ್ ಬ್ಯಾಕ್ ಕೊಡಿ. ದೇಶದಲ್ಲಿ ಮತ್ತೋಮ್ಮೆ ನಮ್ಮ ಮೈಸೂರು ‌ನಂಬರ್ ಒನ್ ಸ್ವಚ್ಚತಾ ನಗರವಾಗಲಿ ಸಹಕರಿಸಿ. ಸ್ವಚ್ಚತಾ ಸರ್ವೇಕ್ಷಣೆಗೆ ಪಾಲಿಕೆ ಸದಸ್ಯರಿಂದಲೇ ಅಪಸ್ವಾರ ವಿಚಾರ. ಪಾಲಿಕೆ ಸದಸ್ಯರ ಜತೆ ನಾವು ಈಗಾಗಲೇ ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಅನುದಾನ ವಿಚಾರದಲ್ಲಿ ಕೆಲವರು ಪ್ರಶ್ನೆ ಎತ್ತಿದ್ದರು.

ಈ ಬಗ್ಗೆ ಈಗಾಗಲೇ ನಾವು ಎಲ್ಲಾ ಪಾಲಿಕೆ‌ ಸದಸ್ಯರ ಜತೆ ಸಂಪರ್ಕದಲ್ಲಿದ್ದೇವೆ. ಅವಶ್ಯಕತೆಯಿದ್ದರೆ ಮತ್ತೋಮ್ಮೆ ಪಾಲಿಕೆ‌ ಸದಸ್ಯರ ಜತೆ ಸಭೆ ನಡೆಸಿ ಚರ್ಚೆ ಮಾಡ್ತಿವಿ. ಕಳೆದ ಬಾರಿ ಸಿಟಿಜನ್ ಫೀಡ್ ಬ್ಯಾಕ್ ನಿಂದ ಕಡಿಮೆ ಅಂಕಗಳು ಬಂದಿತ್ತು. ಪತ್ರಕರ್ತರ ಸಂವಾದದಲ್ಲಿ ನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗ್ಡೆ ಹೇಳಿಕೆ.