ನಿಯಮ ಮೀರಿ ತೆರಿಗೆ ವಸೂಲಿ ಆರೋಪ: ಮೈಸೂರು ಪಾಲಿಕೆಯಿಂದ ತುಘಲಕ್ ದರ್ಬಾರ್ ಎಂದ ಶಾಸಕ ಸಾ.ರಾ ಮಹೇಶ್.

ಮೈಸೂರು,ನವೆಂಬರ್,13,2021(www.justkannada.in): ಉದ್ಯಮಗಳ ಮುಂದೆ ತೆರಿಗೆ ಬಾಕಿ ಬೋರ್ಡ್ ಹಾಕಿರುವ ಮೈಸೂರು ಮಹಾನಗರ ಪಾಲಿಕೆ ನಡೆಗೆ ಶಾಸಕ ಸಾರಾ ಮಹೇಶ್ ಆಕ್ಷೇಪ ವ್ಯಕ್ತಪಡಿಸಿದ್ದು ನಿಯಮ ಮೀರಿ ತೆರಿಗೆ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ಶಾಸಕ ಸಾ.ರಾ ಮಹೇಶ್,  ಬೆಂಗಳೂರಿನಲ್ಲಿಯೂ ಈ ಮಟ್ಟದ ಟ್ಯಾಕ್ಸ್ ಹಾಕುತ್ತಿಲ್ಲ. ಆದರೆ ಮೈಸೂರಿನಲ್ಲಿ ಹೆಚ್ಚುವರಿ ತೆರಿಗೆ ವಸೂಲಿ ಮಾಡಲಾಗ್ತಿದೆ. ಹೆಚ್ಚುವರಿ ತೆರಿಗೆ ವಸೂಲಿಗೆ ಅಧಿಕಾರ ಕೊಟ್ಟವರು ಯಾರು. ಮೈಸೂರು ಪಾಲಿಕೆ ತುಘಲಕ್ ದರ್ಬಾರ್ ನಡೆಯುತ್ತಿದೆ  ಎಂದು ಕಿಡಿಕಾರಿದರು.

ಈಗಾಗಲೇ ಮೈಸೂರಿನಲ್ಲಿ 8ಚಿತ್ರಮಂದಿರ ಮುಚ್ಚಿವೆ, ಉದ್ಯಮಗಳು ನಾಶವಾಗ್ತಿವೆ. ಪಾಲಿಕೆ ಮನಸ್ಸೊಇಚ್ಚೆ ಟ್ಯಾಕ್ಸ್ ಹಾಕಿದ್ರೆ ಸಾರ್ವಜನಿಕರ ಪರಿಸ್ಥಿತಿ ಏನು.? ನನ್ನ ಕನ್ವೆನ್ಶನ್ ಹಾಲ್ ಗೆ ನಿಯಮದ ಪ್ರಕಾರ 4 ಲಕ್ಷ ತೆರಿಗೆ ವಿಧಿಸಬೇಕು. ಆದರೆ ಮೈಸೂರು ಪಾಲಿಕೆ 8.75ಲಕ್ಷ ತೆರಿಗೆ ವಿಧಿಸಿದೆ. ಅಧಿಕ ತೆರಿಗೆ ವಸೂಲಿ ಬಗ್ಗೆ ಸಾಕಷ್ಟು ಉದ್ಯಮಿಗಳು ಕೋರ್ಟ್ ಮೊರೆ ಹೋಗಿದ್ದಾರೆ. ಹಾಗಾಗಿ ಕಳೆದ 5-6ವರ್ಷದಿಂದ ಟ್ಯಾಕ್ಸ್ ಕಟ್ಟಿಲ್ಲ. ನಿಯಮದಂತೆ ತೆರಿಗೆ ವಿಧಿಸಿದ್ರೆ ಎಲ್ಲರೂ ತೆರಿಗೆ ಕಟ್ತಾರೆ. ಆದ್ರೆ ನೀವು ಕಾನೂನು ಬಾಹಿರವಾಗಿ ದಬ್ಬಾಳಿಕೆ ಮಾಡಿದ್ರೆ ತಪ್ಪು. ಅಲ್ಲದೇ ಟ್ಯಾಕ್ಸ್ ಕಟ್ಟಿಲ್ಲ ಅಂತ ಬೋರ್ಡ್ ಹಾಕಿ ಅವಮಾನಿಸೋದು ಸರಿಯಲ್ಲ. ಇದರಿಂದ ಶಾಂತಿ ಭಂಗವಾದ್ರೆ ಕಾನೂನು ಸುವ್ಯವಸ್ಥೆ ಹಾಳಾದ್ರೆ ಪಾಲಿಕೆಯೇ ನೇರ ಹೊಣೆ ಎಂದು ಶಾಸಕ ಸಾ.ರಾ ಮಹೇಶ್ ಎಚ್ಚರಿಕೆ ನೀಡಿದರು.

Key words: Charges -tax evasion- sa Ra Mahesh-Tughlaq Darbar -Mysore.