ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದವರೇ ಬಾಸು ಎಂಬುದು ಸಾಬೀತು ! ನಾಳೆಯೂ ಟಾಸ್ ಗೆದ್ದವರಿಗೇ ಕಪ್ ?!

ಬೆಂಗಳೂರು, ನವೆಂಬರ್ 13, 2021 (www.justkannada.in): ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದವನೇ ಬಾಸು ಎಂಬ ಮಾತು ಪದೇ ಪದೇ ನಿಜವಾಗಿದೆ.

2ನೇ ಸಮಿ ಪೈನಲ್ ಪಂದ್ಯದಲ್ಲೂ ಅದು ಸಾಬೀತಾಗಿದ್ದು, ಟಾಸ್ ಗೆದ್ದ ಆಸ್ಚ್ರೇಲಿಯಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಬಳಿಕ ಭರ್ಜರಿ ಚೇಸ್ ಮಾಡಿ ಜಯಿಸಿದೆ.

ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ಐಪಿಎಲ್ ಮತ್ತು ಟಿ20 ವಿಶ್ವಕಪ್ ಸೇರಿದಂತೆ ಈ ವರಗೂ ಸತತ 17 ಟಿ20 ಪಂದ್ಯಗಳು ನಡೆದಿದ್ದು, ಈ ಪೈಕಿ 16 ಪಂದ್ಯಗಳಲ್ಲಿ ಎರಡನೇ ಬಾರಿಗೆ ಬ್ಯಾಟಿಂಗ್ ಮಾಡಿದ ತಂಡ ಜಯಗಳಿಸಿದೆ.

ಭಾನುವಾರ ಟೂರ್ನಿಯ ಫೈನಲ್ ಪಂದ್ಯ ಕೂಡ ಇದೇ ಮೈದಾನದಲ್ಲಿ ನಡೆಯಲಿದ್ದು, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪಂದ್ಯಗಳು ಪರಸ್ಪರ ಪ್ರಶಸ್ತಿಗಾಗಿ ಕಾದಾಡಲಿವೆ. ಇಲ್ಲೂ ಕೂಡ ಟಾಸ್ ನಿರ್ಣಾಯಕ ಪಾತ್ರವಹಿಸುವ ಸಾದ್ಯತೆ ಇದೆ.