ಕೊಯ್ಲಿ ಕ್ಯಾಪ್ಟನ್’ಶಿಪ್ ಕುರಿತು ಅಚ್ಚರಿ ಹೇಳಿಕೆ ನೀಡಿದ ರವಿಶಾಸ್ತ್ರಿ

ಬೆಂಗಳೂರು, ನವೆಂಬರ್ 13, 2021 (www.justkannada.in): ಬ್ಯಾಟಿಂಗ್‌ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸುವ ಸಲುವಾಗಿ ವಿರಾಟ್‌ ಕೊಹ್ಲಿ ಭಾರತ ಓಡಿಐ ತಂಡದ ನಾಯಕತ್ವವನ್ನೂ ಮುಂದಿನ ದಿನಗಳಲ್ಲಿ ತ್ಯಜಿಸಲಿದ್ದಾರೆಂದು ಟೀಮ್‌ ಇಂಡಿಯಾ ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ ಅಚ್ಚರಿ ಹೇಳಿಕೆ ನೀಡಿದ್ದಾರೆ.

ನಮಿಬಿಯಾ ವಿರುದ್ಧ ಕೊನೆ ಪಂದ್ಯದಲ್ಲಿ ಭಾರತ ಟಿ20 ತಂಡವನ್ನು ವಿಶ್ವಕಪ್‌ನಲ್ಲಿ ಮುನ್ನಡೆಸಿದ್ದರು. ಬ್ಯಾಟಿಂಗ್‌ ಕಡೆಗೆ ಹೆಚ್ಚಿನ ಗಮನ ಕೇಂದ್ರಿಕರಿಸುವ ಸಲುವಾಗಿ ಭಾರತ ಟಿ20 ತಂಡದ ನಾಯಕತ್ವದಿಂದ ಕೆಳಗೆ ಇಳಿಯುತ್ತೇನೆಂದು ವಿರಾಟ್‌ ಕೊಹ್ಲಿ ಟಿ20 ವಿಶ್ವಕಪ್ ಆರಂಭಕ್ಕೂ ಮೊದಲೇ ಪ್ರಕಟಿಸಿದ್ದರು.

ಮಾನಸಿಕವಾಗಿ ಧಣಿದರೆ ಹಾಗೂ ಬ್ಯಾಟಿಂಗ್‌ ಕಡೆಗೆ ಹೆಚ್ಚಿನ ಗಮನಹರಿಸಬೇಕೆಂದು ಅವರಿಗೆ ಅನಿಸಿದರೆ, ಭವಿಷ್ಯದಲ್ಲಿ ಇದು ಸಂಭವಿಸಬಹುದು. ಆದರೆ, ತಕ್ಷಣ ನಡೆಯುವ ವಿಷಯ ಇದಲ್ಲ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.