ನವೆಂಬರ್ 20ರಿಂದ ಗೋವಾದಲ್ಲಿ 52ನೇ ಅಂತಾರಾಷ್ಟ್ರೀಯ ಸಿನಿಮೋತ್ಸವ

ಬೆಂಗಳೂರು, ನವೆಂಬರ್ 13, 2021 (www.justkannada.in): ಗೋವಾದಲ್ಲಿ ನಡೆಯಲಿರುವ 52ನೇ ಅಂತಾರಾಷ್ಟ್ರೀಯ ಸಿನಿಮೋತ್ಸವದ ಅಂತರಾಷ್ಟ್ರೀಯ ಸಿನಿಮಾ ಸ್ಪರ್ಧೆಗೆ 15 ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ.

52ನೇ ಗೋವಾ ಅಂತಾರಾಷ್ಟ್ರೀಯ ಸಿನಿಮಾ ಉತ್ಸವವು ನವೆಂಬರ್ 20 ರಂದು ಆರಂಭಗೊಳ್ಳಲಿದ್ದು 28 ಕ್ಕೆ ಅಂತ್ಯವಾಗಲಿದ್ದು, ಫಿಕ್ಷನ್ ವಿಭಾಗದಲ್ಲಿ ಅಂತರಾಷ್ಟ್ರೀಯ ಸಿನಿಮಾಗಳ ಜೊತೆಗೆ ಮೂರು ಭಾರತೀಯ ಸಿನಿಮಾಗಳು ಸ್ಪರ್ಧೆ ಮಾಡಲಿವೆ.

ಐದು ದೇಶಗಳ ಐದು ಮಂದಿ ಸಿನಿಮಾ ತಜ್ಞರು ಸಿನಿಮಾಗಳನ್ನು ವೀಕ್ಷಿಸಿ ಪ್ರಶಸ್ತಿ ಘೋಷಿಸುತ್ತಾರೆ. ಭಾರತದ ನಿಲಾ ಮದ್‌ಹಬ್ ಪಾಂಡ ಅವರು ಜಡ್ಜ್ ಪ್ಯಾನೆಲ್‌ನಲ್ಲಿದ್ದಾರೆ. ಇವರ ಜೊತೆಗೆ ಬ್ರಿಟನ್, ಇರಾನ್, ಶ್ರೀಲಂಕಾ ಹಾಗೂ ಕೊಲಂಬಿಯಾದ ಸಿನಿಮಾ ತಜ್ಞರು ಸಹ ಇದ್ದಾರೆ.

ಮರಾಠಿಯ ‘ಗೋದಾವರಿ’ ನಿರ್ದೇಶನ: ನಿಖಿಲ್‌ ಮಹಾಜನ್‌. ‘ಮಿ ವಸಂತರಾವ್‌ ನಿ: ನಿಪುಮ್‌ ಅವಿನಾಶ್‌ ಧರ್ಮಾಧಿಕಾರಿ ಹಾಗೂ ಡಿಮಸಾ ಭಾಷೆಯ ‘ಸೆಮ್ಖೋರ್‌’ ನಿರ್ದೇಶನ ಆಮೀ ಬುರಾ ಸ್ಪರ್ಧಿಸಲಿವೆ. ಭಾರತದಿಂದ ಸ್ಪರ್ಧೆಗೆ ಈ ಮೂರು ಸಿನಿಮಾಗಳಷ್ಟೆ ಆಯ್ಕೆಯಾಗಿವೆ.