ಚಾಮರಾಜನಗರ ಆಕ್ಸಿಜನ್ ದುರಂತದ ಬಗ್ಗೆ ಹೈಕೋರ್ಟ್ ಗರಂ:  ನ್ಯಾಯಾಂಗ ತನಿಖೆಗೆ ಸಲಹೆ…

ಬೆಂಗಳೂರು,ಮೇ,4,2021(www.justkannada.in) :  ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 34 ಮಂದಿ ರೋಗಿ ಮೃತಪಟ್ಟ ಘಟನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಬಗ್ಗೆ ನ್ಯಾಯಾಂಗ ತನಿಖೆಗೆ ಸಲಹೆ ನೀಡಿದೆ.

 ಸ್ವಯಂ ಪ್ರೇರಿತ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್ , ಆಕ್ಸಿಜನ್ ಪೂರೈಸಲು ಕೇಂದ್ರ ಸರ್ಕಾರದ ಮೀನಮೇಷ ಎಣಿಸುತ್ತಿರುವುದಕ್ಕೆ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ, ಕೇಂದ್ರ ಸರ್ಕಾರ ನಿರ್ಧಾರ ಪ್ರಕಟಿಸುವವರೆಗೂ ನಾವು ಕಾಯಬೇಕಾ ಎಂದು ಕೇಂದ್ರದ ಪರ ವಕೀಲರನ್ನು ಪ್ರಶ್ನಿಸಿದೆ.

ಕರ್ನಾಟಕದ ಪಾಲಿನ ಆಕ್ಸಿಜನ್ ಕೋಟಾ ಹೆಚ್ಚಿಸುತ್ತಿರೋ ಇಲ್ಲವೋ? ಕಡಿಮೆ ಆಕ್ಸಿಜನ್ ಬಳಕೆ ಇರುವ ಕಡೆ ಹೆಚ್ಚು ಕೊಡುತ್ತಿದ್ದೀರಿ, ಇನ್ನು ಎಷ್ಟು ಮಂದಿ ಆಕ್ಸಿಜನ್ ಇಲ್ಲದೆ ಸಾಯಬೇಕು ಎಂದು ತರಾಟೆಗೆ ತೆಗೆದುಕೊಂಡಿದೆ.

ಕರ್ನಾಟಕಕ್ಕೆ ಆಕ್ಸಿಜನ್ ಕೋಟಾ ಹೆಚ್ಚಿಸುವ ಸಂಬಂಧ ನಾಳೆ ಬೆಳಿಗ್ಗೆ 10.30ರೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಕೇಂಧ್ರ ಸರ್ಕಾರಕ್ಕೆ ಹೈಕೋರ್ಟ್ ಸಿಜೆ ಎ.ಎಸ್ ಓಕಾ ಮತ್ತು ನ್ಯಾ. ಅರವಿಂದಕುಮಾರ್ ಪೀಠ ಗಡುವು ನೀಡಿದೆ. ಇಲ್ಲದಿದ್ದರೇ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವುದಾಗಿ ಎಚ್ಚರಿಕೆ ನೀಡಿದೆ.

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಮಂದಿ ರೋಗಿಗಳು ಮೃತಪಟ್ಟ ಘಟನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ಅಗತ್ಯವಿದೆ.  ಹೀಗಾಗಿ ನ್ಯಾಯಾಂಗ ತನಿಖೆ ಬಗ್ಗೆ ನಿಲುವು ತಿಳಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸಿಜೆ ಎ.ಎಸ್ ಓಕಾ ಮತ್ತು ನ್ಯಾ. ಅರವಿಂದ ಕುಮಾರ್ ಪೀಠ ಸೂಚನೆ ನೀಡಿದೆ.Chamarajanagar -Oxygen –death-24 member- High Court -Advice - judicial investigation.

ಹಾಗೆಯೇ ರಾಜ್ಯವಾರು ಆಕ್ಸಿಜನ್ ಹಂಚಿಕೆ ವಿವರ ಸಲ್ಲಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ ಹೈಕೋರ್ಟ್ ವಿಚಾರಣೆಯನ್ನ ನಾಳೆ ಬೆಳಿಗ್ಗೆ 10.30ಕ್ಕೆ ಮುಂದೂಡಿದೆ.

Key words: Chamarajanagar -Oxygen –death-24 member- High Court -Advice – judicial investigation.