ಚಾಮರಾಜನಗರ ಆಕ್ಸಿಜನ್ ಪ್ರಕರಣ ವಿಚಾರ: ನ್ಯಾಯಾಂಗ ತನಿಖಾ ವರದಿ ಬಗ್ಗೆ ಆರ್.ಧ್ರುವನಾರಾಯಣ್ ಪ್ರತಿಕ್ರಿಯಿಸಿದ್ದು ಹೀಗೆ…

ಮೈಸೂರು,ಮೇ,14,2021(www.justkannada.in):  ಚಾಮರಾಜನಗರ ಆಕ್ಸಿಜನ್ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಇವತ್ತು ಶಾಸಕಾಂಗ ಮತ್ತು ಕಾರ್ಯಂಗ ಸಂಪೂರ್ಣ ವಿಫಲ ಆಗಿದೆ. ಹಾಗಾಗಿ ನ್ಯಾಯಾಂಗದಿಂದ ನಮಗೆ ನ್ಯಾಯ ಸಿಗುವ ಕೆಲಸ ಆಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ತಿಳಿಸಿದ್ದಾರೆ.jk

ಮೈಸೂರಿನಲ್ಲಿ ಇಂದು ಮಾತನಾಡಿದ ಆರ್.ಧೃವನಾರಾಯಣ್, ನ್ಯಾಯಾಂಗದ ತನಿಖಾ ವರದಿ ಸ್ಪಷ್ಟವಾಗಿ ನೀಡಿದೆ. ಚಾಮರಾಜನಗರ ಜಿಲ್ಲಾಡಳಿತ ವಿಫಲವಾಗಿದೆ. ಮತ್ತು ಜಿಲ್ಲಾಧಿಕಾರಿಗಳು ಅಧಿಕಾರವನ್ನ ಸರಿಯಾಗಿ ಬಳಕೆ ಮಾಡಿಲ್ಲ ಎಂದು ವರದಿ ನೀಡಿದೆ. ಶಾಸಕಾಂಗ ಮತ್ತು ಕಾರ್ಯಾಂಗ ಸಂಪೂರ್ಣ ವಿಫಲವಾಗಿರುವ ಹಿನ್ನೆಲೆ ನ್ಯಾಯಾಲಯದಿಂದ ನ್ಯಾಯ ಸಿಗುವ ಕೆಲಸ ಆಗುತ್ತಿದೆ ಎಂದರು.

ಕೇಂದ್ರ ಸಚಿವರು ನಾವು ನೇಣು ಹಾಕಿಕೊಳ್ಳಬೇಕಾ ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಈ ಮೂಲಕ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಆಕ್ಸಿಜನ್ ನನ್ನ ಕೇಂದ್ರದಿಂದ ಕೊಡಿಸಿದ್ದರೆ‌ ಕೋರ್ಟ್ ಯಾಕೆ ಮಧ್ಯಪ್ರವೇಶ ಮಾಡುತ್ತಿತ್ತು ಎಂದು ಆರ್.ಧೃವನಾರಾಯಣ್ ಪ್ರಶ್ನಿಸಿದರು.

ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಿರುದ್ದವೂ ಕಿಡಿಕಾರಿದ ಅರ್.ಧೃವನಾರಾಯಣ್, ಸಿಟಿ ರವಿ ಬೇಜವಾಬ್ದಾರಿ ಹೇಳಿಕೆ ನೀಡಿ. ನ್ಯಾಯಾಧೀಶರು ಸರ್ವಜ್ಞರಾ ಎಂದು ಹೇಳುತ್ತಾರೆ. ನ್ಯಾಯಧೀಶರಿಗೆ ಅವರು ಕೃತಜ್ಞರಾಗಿರಬೇಕು. ಬಿಜೆಪಿಯವರಿಗೆ ಜನರ ಜೀವಕ್ಕಿಂತ ಅಧಿಕಾರ ಮುಖ್ಯವಾಗಿದೆ. ಕರ್ನಾಟಕದಲ್ಲಿ ಡೆತ್ ರೇಟ್ ಜಾಸ್ತಿ ಆಗ್ತಾ ಇದೆ. ನ್ಯಾಯಾಂಗದಿಂದ ನಮಗೆ ನ್ಯಾಯ ಸಿಗುವ ಕೆಲಸ ಆಗುತ್ತಿದೆ ಎಂದರು.Chamarajanagar -oxygen -case –kpcc-R. Dhruvanarayan - judicial inquiry- report

ಅಧಿಕಾರಿಗಳಿಬ್ಬರ ನಡುವೆ ಪರಸ್ಪರ ಆರೋಪ ಕುರಿತು ಪ್ರತಿಕ್ರಿಯಿಸಿದ ಆರ್.ಧೃವನಾರಾಯಣ್, ಈ ರೀತಿ ಮಾಧ್ಯಮದ ಮುಂದೆ ಅಧಿಕಾರಿಗಳು ಪರಸ್ಪರ ದೋಷಾರೋಪಣೆ ಮಾಡಬಾರದು. ಕೆಸಿಎಸ್ ಆರ್ ರೂಲ್ಸ್ ಪ್ರಕಾರ ದೋಷಾರೋಪಣೆ ಮಾಡಬಾರದು. ಈ ನಡುವೆ ತಜ್ಞರ ಸಮಿತಿ ನೀಡಿರುವ ವರದಿಯಲ್ಲಿ ಮೈಸೂರು ಜಿಲ್ಲಾಧಿಕಾರಿ ಪಾತ್ರ ಇಲ್ಲ ಎಂಬ ಕೋರ್ಟ್ ಹೇಳಿಕೆಯನ್ನು ಉಲ್ಲೇಖಿಸಿದರು.

ಈ ನಡುವೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ ಮೈಸೂರು ಹಾಗೂ ಮೈಸೂರಿಗರ ಮೇಲೆ ಕೆಟ್ಟ ಅಭಿಪ್ರಾಯ ಮೂಡಿಸಿದವರು ಜನತೆ ಕ್ಷಮೆ ಕೇಳಬೇಕು ಎಂದಿದ್ದರು. ಈ ಬಗ್ಗೆ ಮಾಜಿ ಸಂಸದ ಧೃವನಾರಾಯಣ್ ಪ್ರತಿಕ್ರಿಯಿಸಿ, ಕ್ಷಮೆ ಕೇಳುವುದು ಅಧಿಕಾರಿಗಳಿಗೆ ಬಿಟ್ಟ ವಿಚಾರ. ಇದರಲ್ಲಿ ನಾವು ಮಧ್ಯೆಪ್ರವೇಶಿಸಲ್ಲ ಎಂದರು.

Key words: Chamarajanagar -oxygen -case –kpcc-R. Dhruvanarayan – judicial inquiry- report