ಮತ್ತೆ ತಾರಕಕ್ಕೇರಿದ ಗಡಿ ಸಂಘರ್ಷ:  ಮಹಾರಾಷ್ಟ್ರದಲ್ಲಿ ಕರ್ನಾಟಕ ಬ್ಯಾಂಕ್ ಗೆ ಮಸಿ ಬಳಿದು ಪುಂಡಾಟ.

ನಾಸಿಕ್,ಡಿಸೆಂಬರ್,7,2022(www.justkannada.in):  ಮಹಾರಾಷ್ಟ್ರ-ಕರ್ನಾಟಕ ಗಡಿ ಸಂಘರ್ಷ ಮತ್ತೆ ತಾರಕಕ್ಕೇರಿದ್ದು ಇದೀಗ ಮಹಾರಾಷ್ಟ್ರದಲ್ಲಿ ಮತ್ತೆ ಉದ್ದಟತನ ತೋರಲಾಗಿದೆ. ನವನಿರ್ಮಾಣ ಸೇನೆ ಕಾರ್ಯಕರ್ತರು ಕರ್ನಾಟಕ ಬ್ಯಾಂಕ್ ಗೆ ಮಸಿ ಬಳಿದು ಪುಂಡಾಟ ಮೆರೆದಿದ್ದಾರೆ.

ಮಹಾರಾಷ್ಟ್ರದಲ್ಲಿ ನಾಸೀಕ್ ನಲ್ಲಿ ರಾಜ್ ಠಾಕ್ರೆ ನೇತೃತ್ವದ ನವ ನಿರ್ಮಾಣ ಸೇನೆ ಕಾರ್ಯಕರ್ತರು ಭಗವಾ ಧ್ವಜ ಹಿಡಿದು ಕರ್ನಾಟಕ ಬ್ಯಾಂಕ್ ಬಾಗಿಲು ಮತ್ತು ಬೋರ್ಡ್‍ ಗೆ  ಮಸಿ ಬಳಿದು  ಕಿಡಿಗೇಡಿತನ ಪ್ರದರ್ಶಿಸಿದ್ದಾರೆಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಗೆಯೇ ಸಿಧದುರ್ಗ ಜೆ.ಕುಡಾಲ ಬಸ್ ನಿಲ್ದಾಣದ ಬಳಿ  ಎಂಎನ್ ಎಸ್  ಕರ್ನಾಟಕದ ಸರ್ಕಾರಿ ಬಸ್ ಗಳಿಗೆ ಮಸಿ ಬಳಿದು ಪುಂಡಾಟ ನಡೆಸಿದ್ದಾರೆ.

Key words: Border –conflict-Karnataka Bank – Maharashtra.