ಹಿಂದಿಗೆ ತಮಿಳಿನ 96 ರಿಮೇಕ್: ರೀಮೇಕ್ ರೈಟ್ಸ್ ಪಡೆದ ಅಜಯ್ ಕಪೂರ್

ಬೆಂಗಳೂರು, ಸೆಪ್ಟೆಂಬರ್ 24, 2021 (www.justkannada.in): ತಮಿಳಿನಲ್ಲಿ ಸಾಕಷ್ಟು ಗಮನ ಸೆಳೆದ ’96’ ಚಿತ್ರ ಬಾಲಿವುಡ್​ನತ್ತ ಹೊರಟಿದ್ದು, ಖ್ಯಾತ ನಿರ್ಮಾಪಕ ಅಜಯ್​ ಕಪೂರ್ ಚಿತ್ರದ ಹಕ್ಕುಗಳನ್ನು ಪಡೆದಿದ್ದಾರೆ.

2018ರಲ್ಲಿ ಬಿಡುಗಡೆಯಾದ ವಿಜಯ್ ಸೇತುಪತಿ ಹಾಗೂ ತ್ರಿಷಾ ಜೋಡಿಯಾಗಿ ನಟಿಸಿದ್ದ ’96’ ಚಿತ್ರ ಸೂಪರ್ ಹಿಟ್ ಆಗಿತ್ತು. ಚಿತ್ರರಂಗಕ್ಕೆ ಹೊಸ ಮಾದರಿಯ ಪ್ರೇಮ ಕತೆಯನ್ನು ಕಟ್ಟಿಕೊಟ್ಟ ಈ ಚಿತ್ರಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿತ್ತು.

ತೆಲುಗಿನಲ್ಲಿ ಸಮಂತಾ ಹಾಗೂ ಶರ್ವಾನಂದ್, ಕನ್ನಡದಲ್ಲಿ ಈ ಚಿತ್ರವನ್ನು ’99’ ಎಂಬ ಹೆಸರಿನಲ್ಲಿ ರಿಮೇಕ್ ಮಾಡಲಾಗಿತ್ತು. ಅದರಲ್ಲಿ ಗಣೇಶ್ ಹಾಗೂ ಭಾವನಾ ಕಾಣಿಸಿಕೊಂಡಿದ್ದರು. ಇದೀಗ ಬಾಲಿವುಡ್ ನತ್ತ ಚಿತ್ರ ಹೊರಟಿದೆ.

ಇದೀಗ ಈ ಚಿತ್ರ ಅಜಯ್ ಕಪೂರ್ ನಿರ್ಮಾಣದಲ್ಲಿ ಹಿಂದಿಯಲ್ಲೂ ತಯಾರಾಗಲಿದೆ. ಆದರೆ ಚಿತ್ರದ ಉಳಿದ ಮಾಹಿತಿಗಳನ್ನು ಅವರು ಬಿಟ್ಟುಕೊಟ್ಟಿಲ್ಲ. ಅದನ್ನು ಸದ್ಯದಲ್ಲೇ ತಿಳಿಸುವುದಾಗಿ ಅವರು ಮಾಹಿತಿ ನೀಡಿದ್ದಾರೆ.

key words: 96 movie will remake in hindi