Tuesday, August 18, 2026

BDA Apartments

Home Front Page ಇಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈಟ್

ಇಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈಟ್

ಬೆಂಗಳೂರು, ಸೆಪ್ಟೆಂಬರ್ 24, 2021 (www.justkannada.in): ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇಂದು ಕಾದಾಟ ನಡೆಸಲಿದೆ.

14ನೇ ಆವೃತ್ತಿಯ ಐಪಿಎಲ್ ನ ಮೊದಲ ಚರಣದಲ್ಲಿ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ನೀಡಿತ್ತು. ಆದರೆ ಎರಡನೇ ಚರಣದ ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿತ್ತು.

ಮೊದಲ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಹಾಲಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ಚೆನ್ನೈ ಅಬ್ಬರಿಸಿತ್ತು. ಈ ಪಂದ್ಯದಲ್ಲಿ ಗೆದ್ದು ಚೆನ್ನೈ ಅಗ್ರ ಸ್ಥಾನಕ್ಕೆ ಏರುವ ಕನಸು ಕಾಣುತ್ತಿದೆ.

ಇನ್ನು ಚೆನ್ನೈ ಆಡಿರುವ 8 ಪಂದ್ಯಗಳಿಂದ 6 ಜಯ, 2 ಸೋಲು ಕಂಡಿದ್ದು 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆರ್ ಸಿಬಿ ಸಹ ಇಷ್ಟೇ ಪಂದ್ಯಗಳಲ್ಲಿ 5 ಜಯ ಸಾಧಿಸಿದ್ದು 10 ಅಂಕ ಸೇರಿಸಿ, ಮೂರನೇ ಸ್ಥಾನದಲ್ಲಿದೆ.

key words: chennai super kings vs royal challengers bangalore match today