ಅಜಯ್​ ರಾವ್ ‘ಕೃಷ್ಣ ಟಾಕೀಸ್’ಗೆ ಸೆನ್ಸಾರ್​ ಗ್ರೀನ್​ ಸಿಗ್ನಲ್​

ಬೆಂಗಳೂರು, ಆಗಸ್ಟ್ 12, 2020 (www.justkannada.in): ಅಜಯ್​ ರಾವ್ ಅಭಿನಯದ ‘ಕೃಷ್ಣ ಟಾಕೀಸ್’ ಸಿನಿಮಾಗೆ ಸೆನ್ಸಾರ್​ ಗ್ರೀನ್​ ಸಿಗ್ನಲ್​ ಸಿಕ್ಕಿದೆ.

ಸರ್ಕಾರ ಚಿತ್ರ ಮಂದಿರಗಳನ್ನ ಆರಂಭ ಮಾಡಿದ ತಕ್ಷಣ ಸಿನಿ ರಸಿಕರನ್ನ ರಂಜಿಸಲು ಕೃಷ್ಣ ಟಾಕೀಸ್​​ ರೆಡಿಯಾಗಿದೆ.
ಈಗಾಗಲೇ ಈ ಚಿತ್ರದ ಟೀಸರ್​ ಮತ್ತು ಪೊಸ್ಟರ್​ ರಿಲೀಸ್​ ಆಗಿ ಗಮನ ಸೆಳೆದಿದೆ. ಅಜಯ್​​ ರಾವ್​ನ ಡಿಫ್ರೆಂಟ್​ ಲುಕ್​ನಲ್ಲಿ ಗಮನ ಸೆಳೆದಿದ್ದಾರೆ.

ಗೋವಿಂದ ರಾಜು ಎ.ಹೆಚ್ ಈ ಚಿತ್ರವನ್ನು ನಿರ್ಮಿಸಿದ್ದು, ವಿಜಯಾನಂದ್ ಆಯಕ್ಷನ್​ ಕಟ್​ ಹೇಳಿದ್ದಾರೆ. ಇನ್ನು ಚಿಕ್ಕಣ್ಣ, ಅಪೂರ್ವ, ಸಿಂಧು ಲೋಕನಾಥ್, ಮಂಡ್ಯ ರಮೇಶ್ ಇತರರು ನಟಿಸಿದ್ದಾರೆ.