ನಾಳೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅವರ ಯಾವುದೇ ರೋಡ್ ಶೋ ಇಲ್ಲ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.

ಬೆಂಗಳೂರು, ಆಗಸ್ಟ್ 25,2023(www.justkannada.in): ಚಂದ್ರಯಾನ-3 ಯಶಸ್ವಿ ಹಿನ್ನೆಲೆ ನಾಳೆ ಬೆಂಗಳೂರಿಗೆ ಇಸ್ರೋ ಕಚೇರಿಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ವಿಜ್ಞಾನಿಗಳನ್ನ ಅಭಿನಂದಿಸಲಿದ್ದಾರೆ. ಅಲ್ಲದೇ ಅದ್ಧೂರಿಯಾಗಿ ರೋಡ್ ಶೋ ಸಹ ನಡೆಸಲಿದ್ದಾರೆ ಎಂದು ವರದಿಯಾಗಿತ್ತು. ಆದರ ಈ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟನೆ ನೀಡಿದ್ದಾರೆ.

ನಾಳೆ ಬೆಂಗಳೂರಿನಲ್ಲಿ ಪ್ರದಾನಿ ನರೇಂದ್ರ ಮೋದಿಯವರ ಯಾವುದೇ ರೋಡ್​ ಶೋ ಆಯೋಜನೆ ಆಗಿಲ್ಲ ಎಂದು ಕೇಂದ್ರ ಸಚಿವೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು,  ನಾಳೆ ಬೆಳಗ್ಗೆ ಎಚ್‍ಎಎಲ್ ಏರ್​ ಪೋರ್ಟ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತ ಕೋರಲಾಗುವುದು. ಬಳಿಕ ಇಸ್ರೋ ಸೆಂಟರ್ ಗೆ ಪ್ರಧಾನಿ ಮೋದಿ ಅವರು ತೆರಳಲಿದ್ದು, ಇಸ್ರೋ ವಿಜ್ಞಾನಿಗಳ ಜೊತೆ  ಸಭೆ ನಡೆಸಲಿದ್ದಾರೆ. ಉಳಿದಂತೆ ಯಾವುದೇ ಕಾರ್ಯಕ್ರಮಗಳಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗುವ ಸಮಯ ಹತ್ತಿರವಾಗುತ್ತಿದೆ, ಭಾರತ ಮಾತ್ರವಲ್ಲ ವಿಶ್ವಕ್ಕೇ ಇವರ ನಾಯಕತ್ವ ಬೇಕು. ಹೀಗಾಗಿ ಬಿಜೆಪಿಯಿಂದ ನಡೆಯುತ್ತಿರುವ ಮತದಾರರ ಚೇತನ ಮಾಹಾಚೇತನ ಅಭಿಯಾನದ ಆಯೋಜಿಸಲಾಗಿದೆ. ಯುವ ಜನತೆಗೆ ಜಾಗೃತಿ, ಹೊಸ ಮತದಾರರ ಸೇರ್ಪಡೆ, ವಿಳಾಸ ಬದಲಾವಣೆ, ನಿಧನರಾದವರ ಹೆಸರಿನ ಕಡಿತ, ನಕಲಿ ಮತದಾರರನ್ನು ಗುರುತಿಸುವಿಕೆ ಹೀಗೆ ಅನೇಕ ಕಾರ್ಯಗಳನ್ನು ಬಿಜೆಪಿ ಕೈಗೆತ್ತುಕೊಳ್ಳಲಿವೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

Key words: No- road show -PM Modi –Bengaluru- tomorrow – Union Minister -Shobha Karandlaje.