ಬೈಕ್ ಗೆ ಕಾರು ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು…

Promotion

ಮೈಸೂರು,ಆ,4,2019(www.justkannada.in): ಕಾರೊಂದು ಬೈಕಿಗೆ ಡಿಕ್ಕಿಯಾಗಿ  ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ತಾಲ್ಲೂಕಿನ ಮರಟಿಕ್ಯಾತನಹಳ್ಳಿ ಗೇಟ್ ಸಮೀಪ ಕಳೆದ ತಡರಾತ್ರಿ ಈ ಘಟನೆ‌ ನಡೆದಿದೆ. ಗೌಡಯ್ಯ (45) ಮೃತ ಬೈಕ್ ಸವಾರ. ಮೃತ ಗೌಡಯ್ಯ ಮೈಸೂರು ತಾಲ್ಲೂಕಿನ ದೊಡ್ಡಮಾರಗೌಡನಹಳ್ಳಿ ನಿವಾಸಿಯಾಗದ್ದು, ಹಿಂಬದಿಯಿಂದ ಬಂದು ಬೈಕ್ ಗೆ ಡಿಕ್ಕಿಹೊಡೆದು ಕಾರು ಎಸ್ಕೇಪ್ ಆಗಿತ್ತು.

ಬಳಿಕ ಬೈಕ್‌ಗೆ ಡಿಕ್ಕಿಹೊಡೆದಿದ್ದ ಕಾರನ್ನು ಪೊಲೀಸರು ಪತ್ತೆಹಚ್ಚಿದ್ದರು. ಈ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Car -collision – bike rider- dies -on the spot.