ನಾಳೆಯಿಂದ ಸಂಸತ್ ಅಧಿವೇಶನ, ನಾಡಿದ್ದು ಬಜೆಟ್ (ಫೆ.1) ಮಂಡನೆ

ಬೆಂಗಳೂರು, ಜನವರಿ 30, 2022 (www.justkannada.in): ಸಂಸತ್ ಬಜೆಟ್ ಅಧಿವೇಶನ ನಾಳೆಯಿಂದ (ಜನವರಿ 31 ರಂದು) ಆರಂಭವಾಗಲಿದೆ.

ಮೊದಲ ದಿನದ ಕಲಾಪದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಅಂದೇ ಆರ್ಥಿಕ ಸಮೀಕ್ಷೆ ಕೂಡ ಮಂಡನೆಯಾಗಲಿದೆ. ಮರು ದಿನ ಫೆಬ್ರವರಿ 1 ರಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.