ಬಾಲಿವುಡ್ ನಟಿಯರ ಟಾಪ್ ಲೆಸ್ ಫೋಟೋಶೂಟ್’ಗಳಿಂದ ಟ್ರೋಲ್ ಪೇಜ್’ಗಳಿಗೆ ಹಬ್ಬ !

ಬೆಂಗಳೂರು, ಫೆಬ್ರವರಿ 20, 2020 (www.justkannada.in): ಹಾಟ್ ಅಂಡ್ ಹ್ಯಾಪನ್ನಿಂಗ್ ಹೀರೋಯಿನ್ ಗಳಾದ ಕಿಯಾರಾ ಅಡ್ವಾಣಿ, ಸನ್ನಿ ಲಿಯೋನಿ, ಕಿಯಾರಾ ಅಡ್ವಾಣಿ ಟಾಪ್ ಲೆಸ್ ಫೋಟೋ ಶೂಟ್ ಟ್ರೋಲ್ ಪೇಜ್ ಗಳಿಗೆ ಭರ್ಜರಿ ಕಂಟೆಂಟ್ ಆಗಿದೆ!

ಹೌದು. ಬಾಲಿವುಡ್ ಪ್ರಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಡಬೂ ರತ್ನಾನಿ ನಡೆಸಿದ ಕ್ಯಾಲೆಂಡರ್ ಫೋಟೋಶೂಟ್ ನಲ್ಲಿ ಕಿಯಾರಾ ಅಡ್ವಾಣಿ ಟಾಪ್ ಲೆಸ್ ಆಗಿದ್ದಾರೆ.

ದೊಡ್ಡ ಎಲೆ ಹಿಂದೆ ನಿಂತು ಕಿಯಾರಾ ಅಡ್ವಾಣಿ ಬೆತ್ತಲಾಗಿದ್ದಾರೆ. ಕಿಯಾರಾ ಅಡ್ವಾಣಿ ಟಾಪ್ ಲೆಸ್ ಆಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಭೂಮಿ ಪಡ್ನೇಕರ್ ಕೂಡ ಟಾಪ್ ಲೆಸ್ ಆಗಿದ್ದಾರೆ. ಉಡುಗೆ ತೊಡದೆ ಬಾತ್ ಟಬ್ ಒಳಗೆ ಕೂತು ಭೂಮಿ ಪಡ್ನೇಕರ್ ಪೋಸ್ ಕೊಟ್ಟಿದ್ದಾರೆ. ಇದೇ ಫೋಟೋಶೂಟ್ ನಲ್ಲಿ ಮಾದಕ ಬೆಡಗಿ ಸನ್ನಿ ಲಿಯೋನಿ ಕೂಡ ಟಾಪ್ ಲೆಸ್ ಆಗಿದ್ದಾರೆ. ದೊಡ್ಡ ಪುಸ್ತಕ ಹಿಡಿದು ಡಬೂ ರತ್ನಾನಿ ಕ್ಯಾಮರಾಗೆ ಸನ್ನಿ ಲಿಯೋನಿ ಪೋಸ್ ಕೊಟ್ಟಿದ್ದಾರೆ.

ಈ ಎಲ್ಲ ಫೋಟೋಗಳನ್ನು ಬಳಸಿಕೊಂಡು ಭರ್ಜರಿಯಾಗಿ ಟ್ರೋಲ್ ಮಾಡಲಾಗುತ್ತಿದೆ.