‘ಅಮೆರಿಕಾ ಅಧ್ಯಕ್ಷನ’ ಮೇಕಿಂಗ್ ವೀಡಿಯೋ ರಿಲೀಸ್ !

ಬೆಂಗಳೂರು, ಜುಲೈ 27, 2019 (www.justkannada.in): ಶರಣ್ ನಟನೆಯ ‘ಅಧ್ಯಕ್ಷ ಇನ್ ಅಮೇರಿಕಾ’ ಸಿನಿಮಾ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ.

ಈಗಾಗಲೇ ಈ ಸಿನಿಮಾ ತನ್ನ ವಿಭಿನ್ನ ಟೈಟಲ್ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಚಿತ್ರದ ಟೀಸರ್ ನಾಳೆ ಯುಟ್ಯೂಬ್ ನಲ್ಲಿ ರಿಲೀಸ್ ಆಗಲಿದೆ.

ವಿಶೇಷವೆಂದರೆ, ಈ ಚಿತ್ರದ ಚಿತ್ರೀಕರಣ ಬಹುತೇಕ ಅಮೇರಿಕಾದಲ್ಲಿಯೇ ನಡೆದಿದೆ. ‘ಈ ಹಿಂದಿನ ‘ಅಧ್ಯಕ್ಷ’ ಚಿತ್ರಕ್ಕೂ ಈಗಿನ ‘ಅಧ್ಯಕ್ಷ’ ಚಿತ್ರಕ್ಕೂ ಯಾವುದೇ ರೀತಿಯ ಸಂಭಂದವಿಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.