ಕುಂಬ್ಳೆ ದಾಖಲೆ ಮುರಿದು ಕ್ರಿಕೆಟ್ ವಿದಾಯ ಹೇಳಿದ ಲಸಿತ್ ಮಾಲಿಂಗ

ಕೊಲಂಬೊ, ಜುಲೈ 27, 2019 (www.justkannada.in): ಬಾಂಗ್ಲಾ ದೇಶದ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಗೆಲ್ಲುವುದರ ಮೂಲಕ ಲಸಿತ್ ಮಾಲಿಂಗ ಅವರಿಗೆ ಗೆಲುವಿನ ವಿದಾಯ ನೀಡಿದೆ.

ಕೊನೆಯ ಪಂದ್ಯದಲ್ಲಿ ಪ್ರಮುಖ ಮೂರು ವಿಕೆಟ್ ಕಬಳಿಸುವುದರೊಂದಿಗೆ ಮಾಲಿಂಗ ಅಪರೂಪದ ದಾಖಲೆ ಬರೆದಿದ್ದಾರೆ. ಮೊದಲ ಓವರ್’ನಲ್ಲೇ ತಮೀಮ್ ಇಕ್ಬಾಲ್ ವಿಕೆಟ್, ನಂತರ 5ನೇ ಓವರ್’ನಲ್ಲಿ ಸೌಮ್ಯ ಸರ್ಕಾರ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಬಾಂಗ್ಲಾದೇಶಕ್ಕೆ ಆಘಾತ ನೀಡಿದರು.

ಇನ್ನು ಮಾಲಿಂಗ ಎಸೆದ 10ನೇ ಓವರ್’ನಲ್ಲಿ ಮುಸ್ತಾಫಿಜುರ್ ರಹಮಾನ್ ವಿಕೆಟ್ ಪಡೆದರು. ಇದರೊಂದಿಗೆ 338 ವಿಕೆಟ್ ಪಡೆಯುವ ಮೂಲಕ ಅನಿಲ್ ಕುಂಬ್ಳೆ ಹಿಂದಿಕ್ಕಿ, ಏಕದಿನ ಕ್ರಿಕೆಟ್’ನಲ್ಲಿ ಗರಿಷ್ಠ ವಿಕೆಟ್ ಪಡೆದ 9ನೇ ಬೌಲರ್ ಎನ್ನುವ ದಾಖಲೆ ಬರೆದರು.