ಟೀಂ ಇಂಡಿಯಾ ಕೋಚ್ ಆಯ್ಕೆ ಮಾಡಲಿರುವ ಕಪಿಲ್ ದೇವ್ ಆ್ಯಂಡ್ ಟೀಂ !

ಬೆಂಗಳೂರು, ಜುಲೈ 27, 2019 (www.justkannada.in): ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಟೀಂ ಇಂಡಿಯಾಗೆ ಕೋಚ್​ ಆಯ್ಕೆ ಮಾಡಲಿದೆ.

ಸಲಹಾ ಸಮಿತಿಯಲ್ಲಿ ಕಪಿಲ್ ದೇವ್, ಮಹಿಳಾ ತಂಡದ ಮಾಜಿ ಕ್ಯಾಪ್ಟನ್​ ಶಾಂತಾ ರಂಗಸ್ವಾಮಿ ಹಾಗೂ ಅಂಶುಮನ್ ಗಾಯಕ್ವಾಡ್ ಇದ್ದಾರೆ.

ಆಗಸ್ಟ್​ನಲ್ಲಿ ಟೀಮ್ ಇಂಡಿಯಾದ ಹೊಸ ತರಬೇತುದಾರರ ಸಂದರ್ಶನ ಮಾಡಲಿದೆ ಅಂತ ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಟೀಮ್​ ಇಂಡಿಯಾ ಪ್ರಸ್ತುತ ಕೋಚ್​ ರವಿಶಾಸ್ತ್ರೀಯವರ ಅವಧಿಯನ್ನು ಮುಂಬರುವ ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿಯವರೆಗೂ ಬಿಸಿಸಿಐ ವಿಸ್ತರಣೆ ಮಾಡಿದೆ.