ಕ್ರಿಕೆಟ್: 38 ರನ್’ಗೆ ಐರ್ಲೆಂಡ್ ಆಲೌಟ್ ! ಟೆಸ್ಟ್ ಗೆದ್ದ ಇಂಗ್ಲೆಂಡ್

ಲಾರ್ಡ್ಸ್, ಜುಲೈ 27, 2019 (www.justkannada.in): ಲಾರ್ಡ್ಸ್ ನಲ್ಲಿ ನಡೆದ ಏಕೈಕ ಟೆಸ್ಟ್ ನ ಮೂರನೇ ದಿನವಾದ ಶುಕ್ರವಾರ ನೆರೆಯ ರಾಷ್ಟ್ರವನ್ನು ಕೇವಲ 38 ರನ್ನಿಗೆ ಆಲೌಟ್ ಮಾಡಿದ ಇಂಗ್ಲೆಂಡ್ ಪಂದ್ಯವನ್ನು ತನ್ನದಾಗಿಸಿಕೊಂಡಿದೆ.

ಲಾರ್ಡ್ಸ್ ಟೆಸ್ಟ್ ಪಂದ್ಯದ ಪ್ರಥಮ ದಿನದ ಮೊದಲ ಅವಧಿಯಲ್ಲೇ ಕೇವಲ 85 ರನ್ನಿಗೆ ಆಲೌಟಾಗಿತ್ತು. ಇನ್ನು ಇದೇ ವೇಳೆ ಬಳಿಕ ಐರ್ಲೆಂಡ್ ತಂಡ 207 ರನ್‌ಗಳಿಗೆ ಆಲೌಟ್ ಆಗಿತ್ತು. ಇದೇ ವೇಳೆ ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 122 ರನ್‌ಗಳ ಹಿನ್ನಡೆಗೊಳಗಾಗಿತ್ತು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಂಗ್ಲರ ಪಡೆ ಪಡೆ ಜ್ಯಾಕ್ ಲೀಚ್ (92) ಹಾಗೂ ಜೇಸನ್ ರಾಯ್ (72) ಬ್ಯಾಟಿಂಗ್ ನೆರವಿನಿಂದ 303 ರನ್ ಪೇರಿಸಿತ್ತು.

ಈ ಮೂಲಕ ಐರ್ಲೆಂಡ್‌ಗೆ 182 ರನ್‌ಗಳ ಗೆಲುವಿನ ಗುರಿ ನೀಡಿತ್ತು.ಬಳಿಕ ಗುರಿ ಬೆನಟ್ಟಿದ ಐರ್ಲೆಂಡ್ ಕ್ರಿಸ್ ವೋಕ್ಸ್ (17/6) ಹಾಗೂ ಸ್ಟುವರ್ಟ್ ಬ್ರಾಡ್ (19/4) ಮಾರಕ ದಾಳಿಗೆ ಸಿಲುಕಿ ಕೇವಲ 15.4 ಓವರ್‌ಗಳಲ್ಲೇ 38 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡಿತ್ತು.