ಯಾರೋ ಮಾಡಿದ ತಪ್ಪಿಗೆ ರೈತ ಸಮುದಾಯವನ್ನು ದೂಷಿಸುವುದು ಸರಿಯಲ್ಲ- ಕೃಷಿ ಸಚಿವ ಬಿ.ಸಿ.ಪಾಟೀಲ್ ಅಸಮಾಧಾನ….

ಹಾವೇರಿ,ಸೆಪ್ಟಂಬರ್, 12,2020(www.justkannada.in): ಯಾರೋ ಒಬ್ಬರು ಜಮೀನಿನಲ್ಲಿ ಗಾಂಜಾ ಬೆಳೆದು ತಪ್ಪು ಮಾಡಿದರು ಎಂದ ಮಾತ್ರಕ್ಕೆ ಅನ್ನಕೊಡುವ ಇಡೀ ರೈತ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ರೈತರು ನಾಡಿನ ಅನ್ನದಾತರು ಎಂದು ಕೃಷಿ ಸಚಿವ ಬಿ.ಸಿ‌.ಪಾಟೀಲ್‌  ಬೇಸರ ವ್ಯಕ್ತಪಡಿಸಿದರು.jk-logo-justkannada-logo

ಹಾವೇರಿಯಲ್ಲಿ ಇಂದು ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ಆ್ಯಪ್ ಬೆಳೆ ಸಮೀಕ್ಷೆ ಪ್ರಾಯೋಗಿಕ ಹಂತದಲ್ಲಿಯೇ ಯಶಸ್ವಿಯಾಗುತ್ತಿರುವುದು ಹೆಮ್ಮೆಯ ವಿಚಾರ. 2017ರಲ್ಲಿ ಬೆಳೆ ಸಮೀಕ್ಷೆ ಮಾಡಿದಾಗ ಸುಮಾರು 3 ಸಾವಿರ ರೈತರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.ಆದರೀಗ ಆ್ಯಪ್ ಬೆಳೆಸಮೀಕ್ಷೆಯಲ್ಲಿ ಸೆ.11ರ ಸಂಜೆವರೆಗೆ 76 ತಾಲ್ಲೂಕುಗಳು ಸಮೀಕ್ಷೆಯಾಗಿರುವುದು ಹಮ್ಮೆಯ ವಿಚಾರ. ರೈತರು ಬಹಳ ಆಸಕ್ತಿಯಿಂದ ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರೈತರು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆ್ಯಪ್ ಬೆಳೆ ಸಮೀಕ್ಷೆ ನಡೆಸುವುದು ಅತ್ಯವಶ್ಯಕ. ಕೆಲವೆಡೆ ನೆಟ್ ಪ್ರಾಬ್ಲಂ‌ನಿಂದಾಗಿ ತಡವಾಗಿದೆ. ಈಗ ಖಾಸಗಿ ನಿವಾಸಿಗಳ ಮೂಲಕವೂ ಸಮೀಕ್ಷೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.blame-farmer-community-wrong-done-someone-agriculture-minister-bc-patel

ನಟರಾಗಲೀ,ನಟಿಯರಾಗಲೀ ಯಾರೂ ತಪ್ಪುಮಾಡಿದರೂ ಅದು ತಪ್ಪೇ. ಡ್ರಗ್ಸ್ ದಂಧೆ ತನಿಖೆ ನಡೆಯುತ್ತಿದೆ. ಅಪರಾಧಿಗಳಾರು ಎಂಬುದು ತನಿಖೆಯಿಂದ ಪತ್ತೆಯಾಗಲಿದೆ. ಈ ಹಿಂದೆ ತಮ್ಮ ಅವಧಿಯಲ್ಲಿನ ಚಿತ್ರರಂಗದಲ್ಲಿ ಪರಿಶುದ್ಧ ವಾತಾವರಣವಿತ್ತು. ಶೂಟಿಂಗ್‌ವೇಳೆಯಲ್ಲಿ ಸಣ್ಣತಪ್ಪಾದರೂ ಪಶ್ಚಾತ್ತಾಪ ಪಡುವಂತಹ ವಾತಾವರಣವಿತ್ತು‌. ಈಗ ಚಿತ್ರರಂಗದಲ್ಲಿ ಡ್ರಗ್ ವಿಚಾರ ಕೇಳಿಬಂದಿರುವುದು ಬೇಸರದ ಸಂಗತಿ.  ಈ ಹಾವಳಿ ಎಲ್ಲಾ ಎಂಗದಲ್ಲಿಯೂ ಇದೆ.ಚಿತ್ರರಂಗದಲ್ಲಾಗಿರುವುದು ಬಹಳ ಬೇಗ ಎದ್ದುಕಾಣುತ್ತದೆ ಎಂದು ಸಚಿವ ಬಿ.ಸಿ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.

Key words: blame -farmer community – wrong done – someone-Agriculture Minister -BC Patel