ಮೈಸೂರಿನ ಕಾಲೇಜುಗಳಲ್ಲಿ ಡ್ರಗ್ಸ್ ಆರೋಪ : ಪ್ರಮೋದ್ ಮುತಾಲಿಕ್ ಹೇಳಿಕೆಗೆ ಪರಿಷತ್ ಸದಸ್ಯ ರಘು ಆಚಾರ್ ತಿರುಗೇಟು….

0
478

ಮೈಸೂರು,ಸೆಪ್ಟಂಬರ್,12,2020(www.justkannada.in): ಮೈಸೂರಿನ ಕಾಲೇಜುಗಳಲ್ಲಿ ಡ್ರಗ್ಸ್ ದಂಧೆ ಇದೆ ಎಂಬ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆಯನ್ನ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಖಂಡಿಸಿದ್ದಾರೆ.jk-logo-justkannada-logo

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಇಂದು ಮಾತನಾಡಿದ ಪರಿಷತ್ ಸದಸ್ಯ ರಘು ಆಚಾರ್,  ಒಂದು ವಿದ್ಯಾಸಂಸ್ಥೆ ಕಟ್ಟ ಬೇಕಾದರೇ ಸಾವಿರಾರು ಜನರ ಶ್ರಮವಿದೆ. ಕೇವಲ ಒಬ್ಬ, ಇಬ್ಬರು ವಿದ್ಯಾರ್ಥಿ ಡ್ರಗ್ ತೆಗೆದುಕೊಂಡರೆ ಇಡೀ ವಿದ್ಯಾಸಂಸ್ಥೆಯ ಬಗ್ಗೆಯೇ ಅಪಪ್ರಚಾರ ಮಾಡೋದು ತಪ್ಪು. ನಿಮ್ಮತ್ರ ದಾಖಲೆ ಇದ್ರೆ ಸಿಸಿಬಿ ಪೊಲೀಸರಿಗೆ ಕೊಡಿ. ಅವರು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಲಿ. ಆದರೆ ಕೇವಲ ಪ್ರಚಾರಕ್ಕೋಸ್ಕರ ಮಾತನಾಡುವ ಚಾಳಿ ಬಿಡಿ. ಸಮಾಜದಲ್ಲಿ ಒಂದು ಸಮುದಾಯವನ್ನು ಟಾರ್ಗೆಟ್ ಮಾಡವುದು ವಿಷಾದನೀಯ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್  ತಿರುಗೇಟು ನೀಡಿದರು.

ರಾಜಕಾರಣಿಗಳ ರಕ್ಷಣೆ ಮಾಡುವ ಸಲುವಾಗಿ 32 ಜನ ರಾಜಕಾರಣಿಗಳ ಹೆಸರನ್ನು ಲಕೋಟೆಯಲ್ಲಿ ಗೃಹ ಸಚಿವರಿಗೆ ನೀಡಿದ್ದಾರಾ..?

 

ರಾಜ್ಯದಲ್ಲಿ ಡ್ರಗ್ಸ್ ದಂಧೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಘು ಆಚಾರ್, ರಾಜ್ಯ ಸರ್ಕಾರ ಡ್ರಗ್ಸ್ ಮಾಫಿಯಾ ಕುರಿತು ಕ್ರಮಕ್ಕೆ ಮುಂದಾಗಿದೆ. ಸಿಎಂ ಬಿಎಸ್ ವೈ ಹಾಗೂ ಗೃಹ ಸಚಿವರು ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಮಾಡುತ್ತಿದ್ದಾರೆ. ನನಗೆ ತಿಳಿದ ಮಟ್ಟಿಗೆ ಯಾವ ರಾಜಕಾರಣಿಗಳು ಡ್ರಗ್ಸ್ ತೆಗೆದುಕೊಂಡಿದ್ದನ್ನು ನೋಡಿಲ್ಲ. 32 ರಾಜಕಾರಣಿಗಳು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಮುತಾಲಿಕ್ ಅವರು ಅಂತಹ ರಾಜಕಾರಣ ಹೆಸರನ್ನು ಮಾಧ್ಯಮಗಳ ಮುಂದೆ ಬಹಿರಂಗ ಮಾಡಬೇಕಿತ್ತು. ರಾಜಕಾರಣಿಗಳನ್ನು ರಕ್ಷಣೆ ಮಾಡುವ ಸಲುವಾಗಿ 32 ಜನ ರಾಜಕಾರಣಿಗಳ ಹೆಸರನ್ನು ಲಕೋಟೆಯಲ್ಲಿ ಗೃಹ ಸಚಿವರಿಗೆ ನೀಡಿದ್ದಾರಾ..?  ಎಂದು ಪ್ರಮೋದ್ ಮುತಾಲಿಕ್ ಗೆ ಪ್ರಶ್ನಿಸಿದ್ದಾರೆ.

ಕೊರೋನಾ ಸೋಂಕು ದೇಶಾದ್ಯಂತ ವ್ಯಾಪಿಸುತ್ತಿದೆ. ರಾಜ್ಯದಲ್ಲೂ ಕೊರೊನಾ ಸೋಂಕು ಮಿತಿ ಮೀರುತ್ತಿದೆ. ಆದರೆ ರಾಜ್ಯ ಸರ್ಕಾರ  ಈ ಹಂತದಲ್ಲೂ ಲಾಕ್ ಡೌನ್ ಸಡಿಲಗೊಳಿಸಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಇದರಿಂದ ಜನ ಸಾಮಾನ್ಯರು ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುವ ಬದಲು ಸ್ವಯಂ ನಿರ್ಧಾರಗಳನ್ನು ಕೈಗೊಳ್ಳಬೇಕು. ಸ್ವಯಂ‌ ನಿರ್ಧಾರ ತೆಗೆದುಕೊಳ್ಳಲು ಇಲ್ಲಿನವರಿಗೆ ಧೈರ್ಯವಿಲ್ಲವೇ ? ಸರ್ಕಾರ ಇನ್ನು ಮುಂದಾದರೂ ಕೊರೋನಾ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು  ರಘು ಆಚಾರ್ ಆಗ್ರಹಿಸಿದರು.

ಡ್ರಗ್ಸ್ ದಂಧೆಯಲ್ಲಿ ಶಾಸಕ ಜಮೀರ್ ಅಹಮದ್ ಹೆಸರು ಕೇಳಿ ಬರುತ್ತಿರುವ ವಿಚಾರ ಕುರಿತು ಮಾತನಾಡಿದ ರಘು ಆಚಾರ್, ಜಮೀರ್ ಅಹಮದ್ ಮಾತ್ರವಲ್ಲ ಯಾರು ತಪ್ಪು ಮಾಡಿದ್ದರೂ ಅದೂ ತಪ್ಪೇ. ಜಮೀರ್ ಅಹಮದ್ ಮೇಲಿನ ಆರೋಪ ಸಾಬೀತಾಗಿದೆಯಾ.? ಎಂದು ಪ್ರಶ್ನಿಸಿದರು.drugs-allegation-colleges-mysore-mlc-raghu-achar-pramod-muthalik

ಕೇವಲ ಆರೋಪ ಮಾಡಲಾಗುತ್ತಿದೆ. ಎಲ್ಲಾ ಸರ್ಕಾರದ ಅವಧಿಯಲ್ಲೂ ಈ ದಂಧೆ ಇತ್ತು. ಎಲ್ಲಿಯವರೆಗೆ ಪೊಲೀಸ್ ಟ್ರಾನ್ಸ್ ಫರ್ಸ್ ಗಳು ರಾಜಕಾರಣಿಗಳ ಅಡಿಯಲ್ಲೇ ನಡೆಯುತ್ತಿರುತ್ತದೋ,ಅಲ್ಲಿಯವರೆಗೂ ಇದು ಹಾಗೆಯೇ ಮುಂದುವರಿಯಲಿದೆ ಎಂದು ರಘು ಆಚಾರ್ ಹೇಳಿದರು.

Key words: Drugs- allegation – colleges – Mysore-MLC-Raghu Achar – Pramod Muthalik