ಬಿಜೆಪಿ, ಜೆಡಿಎಸ್ ನವರು  ಬಲವಂತವಾಗಿ ಸಭಾಪತಿ ಪೀಠದಲ್ಲಿ ಕೂರಿಸಿದ್ರು: ಅದು ಅವರಿಗೆ ಇಷ್ಟವಾಗಿರಲಿಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ ಬೇಸರ…

ಬೆಂಗಳೂರು,ಡಿಸೆಂಬರ್,22,2020(www.justkananda.in):  ಪರಿಷತ್ ಉಪಸಭಾಪತಿ ಧರ್ಮೇಗೌಡರ ಆತ್ಮಹತ್ಯೆ ವಿಚಾರ ಸಂಬಂಧ ಕಳೆದ ಕೆಲ ದಿನಗಳ ಹಿಂದೆ ವಿಧಾನಪರಿಷತ್ ನಲ್ಲಿ ನಡೆದ ಘಟನೆಯನ್ನ ಸ್ಮರಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ,  ಬಲವಂತವಾಗಿ ಉಪ ಸಭಾಪತಿಯನ್ನ ಬಿಜೆಪಿ, ಜೆಡಿಎಸ್ ನವರು ಸಭಾಪತಿ‌ ಪೀಠದಲ್ಲಿ ಕೂರಿಸಿದ್ರು.  ಅದು ಧರ್ಮೇಗೌಡರಿಗೆ ಅವರಿಗೆ ಇಷ್ಟ ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,  ಧರ್ಮೇಗೌಡ ನನ್ನ ಆಪ್ತ ಸ್ನೇಹಿತರಾಗಿದ್ದರು.‌  ಅವರ ತಂದೆಯವರ ಕಾಲದಿಂದಲೂ ಕುಟುಂಬದ ಪರಿಚಯ ಇತ್ತು. ತಳಮಟ್ಟದಿಂದ‌ ರಾಜಕರಣ ಮಾಡಿಕೊಂಡು ಬಂದವರು. ಸಹಕಾರ ಕ್ಷೇತ್ರಗಳಲ್ಲಿ ವಿವಿಧ ಹಂತಗಳಲ್ಲಿ ಕೆಲಸ ಮಾಡಿದವರು. ಧರ್ಮೇಗೌಡರ ತಂದೆ ಎಸ್.ಆರ್ ಲಕ್ಷ್ಮಯ್ಯ ಅವರೂ ನನ್ನ ಆಪ್ತ ಸ್ನೇಹಿತರಾಗಿದ್ದರು. ರೈತಪರ ,ಜನಪರ ಕಾಳಜಿಯುಳ್ಳ ವ್ತಕ್ತಿ ಅಗಲಿರೋದು ಸಾರ್ವಜನಿಕ ಕ್ಷೇತ್ರಕ್ಕೆ ಅಪಾರ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಬ್ರಿಟನ್ ನಿಂದ ಬಂದ‌ ಮೇಲೆ ಹುಡುಕೋದಲ್ಲ….

ಕೊರೊನಾ ರೂಪಾಂತರ ‌ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ,  ಸರ್ಕಾರ ಜನರಲ್ಲಿ ಇರೋ ಆತಂಕ ದೂರ ಮಾಡಬೇಕು. ಬ್ರಿಟನ್ ನಿಂದ ಬಂದ‌ ಮೇಲೆ ಹುಡುಕೋದಲ್ಲ. ಬರುವ ಮೊದಲೇ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಿ ,ಕ್ವಾರಂಟೈನ್ ಮಾಡಬೇಕಿತ್ತು. ಬಂದ ಮೇಲೆ ಹುಡುಕೋದಲ್ಲ ಎಂದು ಟೀಕಿಸಿದರು.

ಚರ್ಚೆ ಮಾಡದೇ ಆತುರವಾಗಿ ತಂದಿದ್ದಾರೆ, ಅಂತ ಅಗತ್ಯ ಇರಲಿಲ್ಲ….

ಗೋಹತ್ಯೆ ನಿಷೇಧ ಕಾಯ್ದೆ ಸುಗ್ರೀವಾಜ್ನೆ ಮೂಲಕ ತಂದಿದ್ದಾರೆ. ವಿಧಾನಸಭೆ,ಪರಿಷತ್ ನಲ್ಲಿ ಚರ್ಚೆ ಮಾಡಿಲ್ಲ. ಚರ್ಚೆ ಮಾಡದೇ ಆತುರವಾಗಿ ತಂದಿದ್ದಾರೆ, ಅಂತ ಅಗತ್ಯ ಇರಲಿಲ್ಲ. ಸಾವಿರಾರು ಕುಟುಂಬಗಳು ಹೈನುಗಾರಿಕೆಯಲ್ಲಿ  ತೊಡಗಿವೆ. ಇದು ಇವರುಗಳಿಗೆ ತೊಂದರೆ ಆಗಲಿದೆ.42ಲಕ್ಷ ಕುಟುಂಬಗಳು ಹೈನುಗಾರಿಕೆಯಲ್ಲಿ ಭಾಗಿ ಆಗಿವೆ. ಕೃಷಿ ಕ್ಷೇತ್ರ, ಚರ್ಮ ಉದ್ಯಮ ಮೇಲೆ ಪರಿಣಾಮ ಬೀಳಲಿದೆ. ನಾವು ಹಾಕುವ ಚಪ್ಪಲಿಗಳು,ಹೆಣ್ಣುಮಕ್ಕಳ ವ್ಯಾನಿಟಿ ಬ್ಯಾಗ್ ಗಳು ಚರ್ಮದಿಂದ ಆಗೋದು. ಇದರಿಂದ ತೊಂದರೆ ಆಗಲಿದೆ. ಲಿಡ್ಕರ್  ಮುಚ್ಚಬೇಕಾಗುತ್ತದೆ ಎಂದು ಸಿದ್ಧರಾಮಯ್ಯ  ಕಿಡಿಕಾರಿದರು.bjp-jds-forced-sit-deputy-speaker-dhramegowda-former-cm-siddaramaiah

Key words: BJP – JDS – forced –sit- deputy speaker- dhramegowda- Former CM- Siddaramaiah