ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣ.

ನವದೆಹಲಿ,ಆಗಸ್ಟ್,6,2021(www.justkannada.in):  ರಾಜೀವ್ ಗಾಂಧಿ ಖೇಲ್​ ರತ್ನ ಪ್ರಶಸ್ತಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಿ ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ರಾಜೀವ್ ಗಾಂಧಿ ಖೇಲ್​ ರತ್ನ ಪ್ರಶಸ್ತಿಯನ್ನ ಇನ್ನು ಮುಂದೆ ಮೇಜರ್​ ಧ್ಯಾನ್ ಚಂದ್​ ಖೇಲ್ ​ರತ್ನ ಪ್ರಶಸ್ತಿಯಾಗಿ ಕೊಡಲ್ಪಡುತ್ತದೆ. ಖೇಲ್ ರತ್ನ ಪ್ರಶಸ್ತಿಗೆ, ಭಾರತೀಯ ಹಾಕಿ ದಿಗ್ಗಜ ಮೇಜರ್​ ಧ್ಯಾನ್​ ಚಂದ್ ಹೆಸರಿಡುವಂತೆ ದೇಶದ ಜನರು ಮನವಿ ಮಾಡಿದ್ದರು.

ದೇಶದ ಜನರ ಮನವಿಯನ್ನ ಪುರಸ್ಕರಿಸಿ ಖೇಲ್​ ರತ್ನ ಪ್ರಶಸ್ತಿಗೆ ಧ್ಯಾನ್ ಚಂದ್​ ಹೆಸರಿಡಲಾಗುವುದು. ಇನ್ನು ಮುಂದೆ ಮೇಜರ್​ ಧ್ಯಾನ್​ ಚಂದ್​ ಖೇಲ್​ ರತ್ನ ಎಂಬ ಹೆಸರಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ENGLISH SUMMARY…

Rajiv Gandhi Khel Ratna award renamed as Major Dhyan Chand Khel Ratna award
New Delhi, August 6, 2021 (www.justkannada.in): Prime Minister Narendra Modi has announced that the Rajiv Gandhi Khel Ratna award has been renamed as Major Dhyan Chand Khel Ratna award.
In his tweet the Prime Minister has informed that the people of India had requested him to the highest sports award in the name of the greatest hockey player of India Major Dhyan Chand.
Keywords: Rajiv Gandhi Khel Ratna Award- renamed -Major Dhyan Chand Khel Ratna Award-PM Modi

Key words: Rajiv Gandhi Khel Ratna Award- renamed -Major Dhyan Chand Khel Ratna Award-PM Modi