ಕಾರ್ಯಕರ್ತರನ್ನ ನಿಲ್ಲಿಸ್ತೀನಿ ಅನ್ನೋದನ್ನ ಬಿಡಿ: ಭವಾನಿ ರೇವಣ್ಣ ಅಭ್ಯರ್ಥಿಯಾದ್ರೆ ಗೆಲುವು ಖಚಿತ- ಹೆಚ್.ಡಿಕೆಗೆ ಸೂರಜ್ ರೇವಣ್ಣ ಟಾಂಗ್. 

Promotion

ಹಾಸನ,ಜನವರಿ,28,2023(www.justkannada.in):  ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣರಿಗೆ ಟಿಕೆಟ್ ಇಲ್ಲ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಎಂಎಲ್ ಸಿ ಸೂರಜ್ ರೇವಣ್ಣ ನೇರಾನೇರ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿ ತನ್ನ ಚಿಕ್ಕಪ್ಪ ಹೆಚ್.ಡಿಕೆಗೆ ತಿರುಗೇಟು ನೀಡಿರುವ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ,  ಹಾಸನದಲ್ಲಿ ಬೇರೆಯವರನ್ನ ಅಭ್ಯರ್ಥಿ ಮಾಡುವುದನ್ನ ಬಿಡಿ. ಭವಾನಿ ರೇವಣ್ಣ ಅಭ್ಯರ್ಥಿಯಾದ್ರೆ ಗೆಲುವು ಖಚಿತ . ಬರೆದು ಕೊಡುತ್ತೇನೆ ಎಂದು ಟಾಂಗ್ ನೀಡಿದ್ದಾರೆ.

ಹಾಸನ ವಿಚಾರದಲ್ಲಿ ಯಾರೂ ತಲೆ ಕೆಡಿಸಿಕೊಳ್ಳಬೇಡಿ.  ಹಾಸನದಲ್ಲಿ ನಿಭಾಯಿಸುವುದು ರೇವಣ್ಣರಿಗೆ ಗೊತ್ತು.  ಕಳೆದ15 ವರ್ಷದಿಂದ ರೇವಣ್ಣ ಹಾಸನ ನಿಭಾಯಿಸುತ್ತಿದ್ದಾರೆ.  2018ರಲ್ಲಿ ಹಾಸನ ಕ್ಷೇತ್ರವನ್ನ ಜೆಡಿಎಸ್ ಕಳೆದುಕೊಂಡಿದೆ. 2023ರಲ್ಲಿ ಹಾಸನದಲ್ಲಿ ಜೆಡಿಎಸ್ ಮರುಜನ್ಮ ಪಡೆಯಬೇಕು.  ಹಾಸನದಲ್ಲಿ 15 ವರ್ಷದಿಂದ ಸತತವಾಗಿ ಗೆಲ್ಲಿಸಿದ್ದು ರೇವಣ್ಣ.   ರೇವಣ್ಣರವರ ಸ್ವಂತ ಪ್ರಯತ್ನದಿಂದ ಹಾಸನದಲ್ಲಿ 7 ಸೀಟ್ ಗೆದ್ದಿದ್ದೇವೆ.  ಹೀಗಾಗಿ ಹಾಸನ ರಾಜಕಾರಣವನ್ನ ಹೆಚ್.ಡಿ ರೇವಣ್ಣ ಅವರು ನೋಡಿಕೊಳ್ಳುತ್ತಾರೆ. ಹಾಸನವನ್ನ ರೇವಣ್ಣ ಅವರು ಅರಿತಷ್ಟು ಯಾರು ಅರಿತಿಲ್ಲ. ರೇವಣ್ಣ ಬಿಟ್ಟರೇ ನಿರ್ಧರಿಸುವ ಅಧಿಕಾರ ಇನ್ಯಾರಿಗೂ ಇಲ್ಲ ಎಂದರು.

ಜೆಡಿಎಸ್ ನಲ್ಲಿ ಅಭ್ಯರ್ಥಿ ಆಯ್ಕೆ  ಮಾಡುವುದು ನಮ್ಮ ತಾತ ಹೆಚ್.ಡಿ ದೇವೇಗೌಡರು. ಹಿಂದಿನಿಂದಲೂ ನಮ್ಮ ತಾತ ಅವರೇ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ. ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಎಂದು ಹೆಚ್.ಡಿ ದೇವೇಗೌಡರು ನಿರ್ಧಾರ ಮಾಡುತ್ತಾರೆ. ನನ್ನನ್ನೂ ಎಂಎಲ್ ಸಿ ಚುನಾವಣೆಗೆ ಅಭ್ಯರ್ಥಿ ಮಾಡಿದ್ದು ಹೆಚ್.ಡಿ ದೇವೇಗೌಡರು.  ಭವಾನಿ ರೇವಣ್ಣ ಸ್ಪರ್ಧಿಸಿದ್ರೆ ಗೆಲುವು ಖಚಿತ ಅಂತಾ ಬರೆದುಕೊಡುತ್ತೇನೆ ಎಂದು ಸೂರಜ್ ರೇವಣ್ಣ ಹೇಳಿದರು.

Key words: Bhavani Revanna –hassan-candidate- Suraj Revanna -Tong – HD Kumaraswamy