ಡಬಲ್ ಇಂಜಿನ್ ಸರ್ಕಾರ ದೇಶ ಕಟ್ಟಲು ಶ್ರಮಿಸುತ್ತಿದೆ- ಕಾಲೇಜು ದಿನಗಳನ್ನ ಮೆಲುಕು ಹಾಕಿದ ಸಿಎಂ ಬೊಮ್ಮಾಯಿ.

ಹುಬ್ಬಳ್ಳಿ,ಜನವರಿ,28,2023(www.justkannada.in):  ಡಬಲ್ ಇಂಜಿನ್ ಸರ್ಕಾರ ದೇಶವನ್ನ ಕಟ್ಟಲು ಶ್ರಮಿಸುತ್ತಿದೆ,. ಗೃಹ ಇಲಾಖೆಯಲ್ಲಿ ಅಮಿತ್ ಶಾ  ಅಗಾದ ಬದಲಾವಣೆ ಮಾಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ನುಡಿದರು.

ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮವನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದರು. ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಅಮೃತ ಮಹೋತ್ಸವಕ್ಕೆ ಅಮಿತ್ ಶಾ ಬಂದಿದ್ದು ಖುಷಿ ನೀಡಿದೆ. ನಾನೂ ಕೂಡ ಇದೇ ಭೂಮರೆಡ್ಡಿ ಕಾಲೇಜಿನಲ್ಲಿ ಓದಿದ್ದೇನೆ. ನಾವು ಕಲಿತ ಕಾಲೇಜು ಶಾಲೆ ಮರೆಯಬಾರದು ಎಂದು ಕಾಲೇಜು ದಿನಗಳನ್ನ ಮೆಲುಕು ಹಾಕಿದರು.

ನವಭಾರತ ನಿರ್ಮಾಣದಲ್ಲಿ ಕೆಎಲ್ ಇ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ.  ಮುಂದಿನ 25 ವರ್ಷಗಳಲ್ಲಿ ದೇಶ ಕಟ್ಟಲು  ಮಹತ್ವದ ಪಾತ್ರ ನೀಡುತ್ತಿದೆ.  ವಿದೇಶಿ  ಬಂಡವಾಳ  ಹೂಡಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಡಬಲ್ ಇಂಜಿನ್ ಸರ್ಕಾರ ದೇಶಕಟ್ಟಲು ಶ್ರಮಿಸುತ್ತಿದೆ ಎಂದು ಹೇಳಿದರು.

Key words:  double engine -government – build –countr- CM -Bommai