ಕಿಡ್ನಾಪ್ ಆಗಿದ್ದ ಮಗುವನ್ನ ಪತ್ತೆ ಹಚ್ಚಿ ಪೋಷಕರಿಗೊಪ್ಪಿಸಿದ ಪೊಲೀಸರು…

ಬೆಳಗಾವಿ,ಜು,29,2019(www.justkannada.in): ಅಪರಹಣಗೊಳಗಾಗಿದ್ದ ಮಗುವನ್ನು ಯಶಸ್ವಿಯಾಗಿ ಪತ್ತೆ ಹಚ್ಚು ಮರಳಿ ಪೋಷಕರ ಮಡಲಿಗೆ ನೀಡಿದ್ದಾರೆ.

ಫೆಬ್ರವರಿ- 21 ರಂದು ನಡೆದ ಸವದತ್ತಿ ಯಲ್ಲಮ್ಮನ ಜಾತ್ರೆಯಲ್ಲಿ  ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಅದರಳ್ಳಿ ತಾಂಡಾದ ಮಾನಪ್ಪ.ಮೀಟೆಪ್ಪ.ಲಮಾಣಿ ದಂಪತಿಗಳ 6 ವರ್ಷದ ಹೆಣ್ಣು ಮಗು ಅಪಹರಣಕ್ಕೊಳಗಾಗಿತ್ತು. ಜಿಲ್ಲೆಯ ರೋಣ ತಾಲ್ಲೂಕಿನ ಹೊಳೆ ಆಲೂರ ಗ್ರಾಮದ ರೇಣವ್ವ. ಉರ್ಫ್ ರಂಗವ್ವ ಎಂಬ ಮಹಿಳೆಯಿಂದ ಮಗು ಕಿಡ್ನಾಪ ಆಗಿತ್ತು. ಈ ಕುರಿತು ಸವದತ್ತಿ ಪೋಲಿಸ್ ಸ್ಟೇಷನ್ ನಲ್ಲಿ ಮಾನಪ್ಪ ಲಮಾಣಿ. ದೂರು ನೀಡಿದ್ದರು. ಸವದತ್ತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು..

ಪ್ರಕರಣ ದಾಖಲಿಸಿಕೊಂಡಿದ್ದ   ಸವದತ್ತಿ ಠಾಣಾ ಪೊಲೀಸರು ಮಗುವಿಗಾಗಿ  ಶೋಧಕಾರ್ಯ ನಡೆಸಿದ್ದರುಸವದತ್ತಿ ಪಿ.ಎಸ್.ಐ. ಪಿ.ಎಸ್.ಪೂಜಾರಿ ಆನಂದ್ ಕ್ಯಾರಕಟ್ಟಿ ಪ್ರೊ ಪೆಷನರಿ ಡಿ.ಎಸ್.ಪಿ. ಪ್ರಿಯದರ್ಶಿನಿ ಸಾಣಿಕೊಪ್ಪ ನೇತೃತ್ವದಲ್ಲಿ ಶೋಧ ಕಾರ್ಯ ನಡೆಸಿದ್ದರು.

ಈ ನಡುವೆ  ಕಿಡ್ನಾಪ ಆದ ಮಗು  ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಸ್ಥಾನದ ಬಳಿ ಇರುವ  ಬಗ್ಗೆ ಖಚಿತ ಮಾಹಿತಿ ಪಡೆದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮಗುವನ್ನು ಅಪಹರಿಸಿದ ರಂಗವ್ವ ಹಳ್ಳೂರ್ ರನ್ನು  ವಶಕ್ಕೆ ಪಡೆದುಕೊಂಡು ಮಗುವನ್ನು ಪಾಲಕರಿಗೆ ಒಪ್ಪಿಸಿದ್ದಾರೆ.

Key words: belagavi-Police- Find out- child – kidnapped-two arrest