ಕುತಂತ್ರದಿಂದ  ಅಧಿಕಾರಕ್ಕೇರಿದ್ದೀರಿ: ರಾಜ್ಯದಲ್ಲಿ ಉತ್ತಮ ಕೆಲಸ ಮಾಡಲು ಪ್ರಯತ್ನಿಸಿ-ಮಾಜಿ ಸಿಎಂ ಹೆಚ್.ಡಿ ಕುಮರಸ್ವಾಮಿ..

ಬೆಂಗಳೂರು,ಜು,29,2019(www.justkannada.in): ರಾಜ್ಯದಲ್ಲಿ ಕುತಂತ್ರದಿಂದ ಅಧಿಕಾರಕ್ಕೇರಿದ್ದೀರಿ. ಉತ್ತಮ ಕೆಲಸ ಮಾಡಲು ಪ್ರಯತ್ನಿಸಿ ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಲಹೆ ನೀಡಿದರು.

ವಿಧಾನಸಭೆಯಲ್ಲಿ ಇಂದು ಮಾತನಾಡಿ ರಾಜ್ಯದಲ್ಲಿ ಆಡಳಿತ ಯತ್ನ ಕುಸಿದಿದೆ ಎಂಬ ಬಿಎಸ್ ವೈ ಹೇಳಿಕೆಗೆ ಆಕ್ಷೇಪಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಮೈತ್ರಿ ಸರ್ಕಾರದ ವಿರುದ್ದ ಸುಳ್ಳು ಆರೋಪ ಬೇಡ.  14 ತಿಂಗಳ ಕಾಲ ಜನರಿಗಾಗಿ ಪ್ರಮಾಣಿಕ ಆಡಳಿತ ನಡೆಸಿದ್ದೇನೆ. ಬಾಯಿಚಪಲಕ್ಕೆ  ಆರೋಪ ಮಾಡುವುದು ಸರಿಯಲ್ಲ. ನಾನು ಸಾಲಮನ್ನಾಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ದೋಸ್ತಿ ಸರ್ಕಾರದ ಇತಿಮಿತಿಯಲ್ಲಿ ಸಾಲಮನ್ನಾ ಮಾಡಿದ್ದೇನೆ ಎಂದರು.

ಹಾಗೆಯೇ ಕಳೆದ 14 ತಿಂಗಳಿಂದಲೂ ಬಿಎಸ್ ಯಡಿಯೂರಪ್ಪ ಈ ಸ್ಥಾನಕ್ಕೇರಲು ಪ್ರಯತ್ನ ಮಾಡಿದ್ದಾರೆ. ಪಾಪದ ಸರ್ಕಾರವನ್ನ ಕೆಡವಿ ಏನು ಪವಿತ್ರ ಸರ್ಕಾರ ತಂದಿದ್ದೀರೋ ತೃಪ್ತ ಶಾಸಕರು ಯಾವಾಗ ಪಿಶಾಚಿಗಳಾಗಿ ಬರ್ತಾರೋ ಗೊತ್ತಿಲ್ಲ ಎಂದು ಸಿಎಂ ಬಿಎಸ್ ವೈಗೆ ಹೆಚ್.ಡಿ ಕುಮಾರಸ್ವಾಮಿ ಕಿಚಾಯಿಸಿದರು.

ಹಾಗೆಯೇ 17 ಮಂದಿ ಅತೃಪ್ತ ಶಾಸಕರಿಗೆ ಥ್ಯಾಂಕ್ಸ್ ಹೇಳಿ. ಅವರಿಂದ ನೀವು ಅಲ್ಲಿ ಕೂತಿದ್ದೀರಿ. ಕುತಂತ್ರದಿಂದ  ಅಧಿಕಾರಕ್ಕೇರಿದ್ದೀರಿ. ಇನ್ನು ಹಲವು ಶಾಸಕರನ್ನ ರಾಜೀನಾಮೆ ಕೊಡಿಸಲು ಮುಂದಾಗಿದ್ದೀರಿ. ಮೊದಲು ಅದನ್ನ ನಿಲ್ಲಿಸಿ ರಾಜ್ಯದಲ್ಲಿ ಉತ್ತಮ ಕೆಲಸ ಮಾಡಿ ಎಂದರು.

Key words:  Try –goodwork-in Former CM -HD Kumaraswamy-legislative assembly