Friday, August 21, 2026

BDA Apartments

Home Front Page ನಾವು ಸಾವಿನ ಸಂಖ್ಯೆ ಮುಚ್ಚಿಟ್ಟಿಲ್ಲ: ಅನ್ ಲಾಕ್ ಆದ್ರೂ ಎಚ್ಚರದಿಂದಿರಿ- ಸಚಿವ ಸುಧಾಕರ್ ಮನವಿ.

ನಾವು ಸಾವಿನ ಸಂಖ್ಯೆ ಮುಚ್ಚಿಟ್ಟಿಲ್ಲ: ಅನ್ ಲಾಕ್ ಆದ್ರೂ ಎಚ್ಚರದಿಂದಿರಿ- ಸಚಿವ ಸುಧಾಕರ್ ಮನವಿ.

ಬೆಂಗಳೂರು,ಜೂನ್,11,2021(www.justkannada.in):  ರಾಜ್ಯದಲ್ಲಿ ಕೋವಿಡ್ ಸಾವಿನ ಸಂಖ್ಯೆ ಮುಚ್ಚಿಟ್ಟ ಆರೋಪ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ನಾವು ಯಾವುದೇ ಸಾವಿನ ಸಂಖ್ಯೆಯನ್ನ ಮುಚ್ಚಿಟ್ಟಿಲ್ಲ ಎಂದು ತಿಳಿಸಿದ್ದಾರೆ.jk

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುಧಾಕರ್, ನಾವು ಯಾವುದೇ ಮಾಹಿತಿಯನ್ನ ಮುಚ್ಚಿಟ್ಟಿಲ್ಲ. ನಮ್ಮ ರಾಜ್ಯವನ್ನ ಬಿಹಾರಗೆ ಹೋಲಿಸಬೇಡಿ. ನಾವು ಸಾವಿನ ಸಂಖ್ಯೆಯನ್ನ ಮುಚ್ಚಿಟ್ಟಿಲ್ಲ ಎಂದರು.

ಇನ್ನು 19 ಜಿಲ್ಲೆಗಳಲ್ಲಿ ಅನ್ ಲಾಕ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಅನ್ ಲಾಕ್ ಮಾಡಿದರೂ ಜನರು ಎಚ್ಚರದಿಂದಿರಬೇಕು. ಆರ್ಥಿಕ ಸಂಕಷ್ಟ ಹಿನ್ನೆಲೆಯಲ್ಲಿ ಅಳೆದು ತೂಗಿ ಅನ್ ಲಾಕ್ ಕ್ರಮ ಕೈಗೊಳ್ಳಲಾಗಿದೆ. ವಿನಾಯಿತಿಯಿಂದ ಸೋಂಕು ಹೆಚ್ಚಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ವಿದೇಶದಿಂದ ಮತ್ತು ಬೇರೆ ರಾಜ್ಯದಿಂದ ಬರುವವರಿಗೆ ಟೆಸ್ಟ್ ಕಡ್ಡಾಯವಾಗಿದೆ. ಹಾಗೆಯೇ ಗ್ರಾಮದಲ್ಲಿ ಐವರು ಸೋಂಕಿತರಿದ್ದರೇ ಸೀಲ್ ಡೌನ್ ಮಾಡಲಾಗುತ್ತದೆ ಎಂದು ಸಚಿವ ಸುಧಾಕರ್ ತಿಳಿಸಿದರು.

Key words: corona-Be careful- unlocked-Minister- Sudhakar.