ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡಲಿ ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯ: ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ಮಾಜಿ ಸಚಿವ ಎಂ.ಬಿ ಪಾಟೀಲ್..

ಬೆಂಗಳೂರು,ನ,6,2019(www.justkannada.in): ರಾಜ್ಯಸರ್ಕಾರಕ್ಕೆ  100 ದಿನವೇ ಆಗಲಿ ಸಾವಿರ ದಿನವೇ ಆಗಲಿ. ಮೊದಲು ನೆರೆ ಪೀಡಿತ ಪ್ರದೇಶಗಳಲ್ಲಿ ಕೆಲಸ ಮಾಡಲಿ. ನೆರೆ ಪೀಡಿತ ಪ್ರದೇಶಗಳಲ್ಲಿ ಜನರ ಸಮಸ್ಯೆಗೆ ಪರಿಹಾರ ನೀಡಲಿ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಆಗ್ರಹಿಸಿದರು.

ಸದಾಶಿವನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಎಂ ಬಿ ಪಾಟೀಲ್, ಉತ್ತರ ಕರ್ನಾಟಕ, ಮುಂಬಯಿ ಕರ್ನಾಟಕ , ಚಿಕ್ಕಮಗಳೂರು ಜಿಲ್ಲೆಯ ಸುತ್ತ ಮುತ್ತ ರಾಜ್ಯ ಕಂಡರಿಯದ ಪ್ರವಾಹ ಉಂಟಾಗಿತ್ತು. ನಾವು ಕೃಷ್ಣಾ ನದಿಯಲ್ಲಿ ಒಳ ಹರಿವು ಏನ್ ಇದೆ ಅದಕ್ಕೆ ಅಣೆಕಟ್ಟು ಕಟ್ಟಿದ್ದಾಗ ಮೂರು ಲಕ್ಷ ಕ್ಯುಸೆಕ್ಸ್ ನೀರು ಹೆಚ್ಚಾಗಿತ್ತು. ಕೃಷ್ಣ ನದಿ ಪಾತ್ರದಲ್ಲಿ ನಾನು ಭೇಟಿ ಕೊಟ್ಟಿದೆ ಅಲ್ಲಿ ಬ್ರಿಟಿಷ್ ಮಾರ್ಕಿಂಗ್ ಇದೆ. ಅಲ್ಲಿ ಅವಾಗ ಅಷ್ಟು ಪ್ರವಾಹ ಆಗಿರಲಿಲ್ಲ. ಪ್ರವಾಹದ ಲೈನ್ ಮಾರ್ಕ್ ಇತ್ತು ಇವಾಗ ಮತ್ತೆ ಪ್ರವಾಹ ಬಂದ್ದು ಮತ್ತೆ ಮಾರ್ಕಿಂಗ್ ಆಗಿದೆ. ಫ್ಲಡ್ ಲೈನ್ ಇದೆ ಅದು ಹೊಸದಾಗಿ ಇವಾಗ ಐಡೆಂಟಿಫೈ ಆಗಿದೆ. ಮಾಧ್ಯಮಗಳಲ್ಲಿ ಸಂತ್ರಸ್ತರ ಗೋಳಿನ ಬಗ್ಗೆ ಗಮನ ಕೊಟ್ಟಿದ್ದೀರಿ. ಮನೆ ಬಿದ್ದಾಗ 1 ಲಕ್ಷ, 5 ಕೊಡುತ್ತೀರಾ ಅದು ಒಂದು ಭಾಗ. ಇವಾಗ ನೀಡುತ್ತಿರುವುದು ಶಾಶ್ವತವಾದ ಪರಿಹಾರನಾ..? ಎಂದು ಪ್ರಶ್ನಿಸಿದರು.

10ರಿಂದ 90ರಷ್ಟು ಜನ ನಮ್ಮ ಮನೆಗಳನ್ನು ಸ್ಥಳಾಂತರ ಮಾಡಿ ಎಂದು ಹೇಳುತ್ತಿದ್ದಾರೆ. ಆದರೆ ಸಚಿವರು ಅದಕ್ಕೆ ಗಮನ ಕೊಡುವಂತ್ತೆ ಕಾಣಿಸುತ್ತಿಲ್ಲ. ಅವರುಗಳಿಗೆ ಪುನರ್ವಸತಿ ಕಲ್ಪಿಸಿಕೊಡಬೇಕಾಗುತ್ತೆ ಅದು ಶಾಶ್ವತವಾದ ಪರಿಹಾರ. ಭಾಗಶಃ ಪೂರ್ಣವಾಗಿ ಬಿದ್ದ ಮನೆಗಳಿಗೆ ಮನೆ ಕಟ್ಟಿಕೊಡುತ್ತೇವೆ ಎಂದು ಹೇಳುತ್ತಾರೆ. ಅದೇ ಜಾಗದಲ್ಲಿ ಮತ್ತೆ ಮಳೆ ಬಂದು ನೀರು ತುಂಬಿಕೊಂಡು ಮನೆಗಳು ಮತ್ತೆ ಬಿದ್ರೆ ಅವಾಗ ಪುನಃ ಅವರಿಗೆ ಪರಿಹಾರ ಕೊಡುತ್ತೀರಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಚಿವ ಮಾದುಸ್ವಾಮಿ , ಆರ್ ಅಶೋಕ್ ಅವರಿಗೆ ಪತ್ರವನ್ನು ಬರೆದಿದ್ದೇನೆ…

ಸಚಿವ ಮಾದುಸ್ವಾಮಿ , ಆರ್ ಅಶೋಕ್ ಅವರಿಗೆ ಪತ್ರವನ್ನು ಬರೆದಿದ್ದೇನೆ. ಜೊತೆಗೆ ಮುಖ್ಯಮಂತ್ರಿಗಳಿಗೆ ಕೂಡ ಪತ್ರವನ್ನು ಬರೆದಿದ್ದೇನೆ. ನೆರೆ ಪೀಡಿತ ಪ್ರದೇಶಗಳಲ್ಲಿ ಪುನರ್ವಸತಿ ಕಲ್ಪಿಸಿಕೊಡುತ್ತೇವೆ ಎಂದು ಹೇಳಿದ್ರು. ಯಾರಿಗೂ ಬೆಳೆ ಪರಿಹಾರ ಕೊಟ್ಟಿಲ್ಲ ಅವರಿಗೆ ಪರಿಹಾರ ಕೊಡಬೇಕು. ಕಬ್ಬು ಬೆಳೆಗಾರರಿಗೆ ಒಂದು ಲಕ್ಷ ಒಂದು ಎಕರೆ ಜಮೀನಿಗೆ ಕೊಡಬೇಕು ಎಂದು ಕೇಳಿಕೊಳ್ಳುತ್ತೇನೆ. ಇದಕ್ಕೆ ಶಾಶ್ವತವಾದ ಪರಿಹಾರ ಕೊಡಬೇಕು ಎಂದು ಸರ್ಕಾರವನ್ನು ಕೇಳಿಕೊಳ್ಳುತ್ತೇನೆ. ರೆವಿನ್ಯೂ ಸಚಿವರಿಗೆ ಇಂತಹ ಸಂದರ್ಭಗಳಲ್ಲಿ ಜವಾಬ್ದಾರಿ ಹೆಚ್ಚು ಇರುತ್ತೆ. ಅಶೋಕ್ ಅವರು ಇದರ ಕಡೆ ಗಮನ ಕೊಡಬೇಕು. ನಾನು ಅವರ ಮೇಲೆ ಆಪಾದನೆ ಮಾಡುತ್ತಿಲ್ಲ. ಎಲ್ಲರಿಗೂ ಪುನರ್ವಸತಿ ಕಲ್ಪಿಸುವ ಕೆಲಸ ಆಗಬೇಕು ಜೊತೆಗೆ ಶಾಶ್ವತವಾದ ಪರಿಹಾರ ಕೊಡಬೇಕು ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಆಗ್ರಹಿಸಿದರು.

ನಾನು ಸಾಫ್ಟ್ ಕಾರ್ನರ್ ತೋರಿಸುತ್ತಿಲ್ಲ , ಜನರ ಕಣ್ಣಿರು ಒರೆಸುವ ಕೆಲಸ ಮಾಡಬೇಕು ಅಷ್ಟೇ. ನೂರು ದಿನದಲ್ಲಿ ಇದರ ಬಗ್ಗೆ ಗಮನ ಕೊಟ್ಟಿಲ್ಲ ಇನ್ನೂ ಮುಂದಾದ್ರು ಗಮನ ಕೊಡಲಿ. ನಾನು ಇದರಲ್ಲಿ ರಾಜಕೀಯ ಮಾಡುವುದಕ್ಕೆ ಹೋಗಲ್ಲ ಎಂದ ಎಂ.ಬಿ ಪಾಟೀಲ್, ಸರ್ಕಾರ  ನೆರೆ ಪೀಡಿತ ಪ್ರದೇಶಗಳಲ್ಲಿ ಹೋಗಿ ಗ್ರಾಮ ಸಭೆಗಳನ್ನು ಮಾಡಲಿ.  ಅಲ್ಲಿ ಹೋಗಿ ಕೆಲಸ ಮಾಡುವುದಕ್ಕೆ ಅನುಕೂಲ ಆಗುತ್ತೆ. ಪುನರ್ವಸತಿ ಕೇಂದ್ರವನ್ನು ಮಾಡುವುದಕ್ಕೆ ಬಹಳ ದುಡ್ಡು ಖರ್ಚು ಆಗುತ್ತೆ. ಸರ್ಕಾರ ಎಚ್ಚೆತ್ತುಕೊಂಡು ಕೆಲಸ ಮಾಡಬೇಕು. ಫ್ಲಡ್ ನೈಲ್ ಆಚೆಗೆ ಮನೆಗಳನ್ನು ನಿರ್ಮಿಸಿ ಕೊಡಬೇಕು ಅದರಿಂದ ಪರಿಹಾರ ಸಾಧ್ಯ ಎಂದು ಸಲಹೆ ನೀಡಿದರು.

ಕುಮಾರಸ್ವಾಮಿ, ದೇವೇಗೌಡರು ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸುತ್ತಿರುವ ಬಗ್ಗೆ ಅವರನ್ನೇ ಕೇಳಿ….

ಹೆಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸುತ್ತಿರುವ ಬಗ್ಗೆ ಅವರನ್ನೇ ಕೇಳಿ, ನಿಮ್ಮದು ಜ್ಯಾತ್ಯಾತೀತ ನಿಲುವು ಇತ್ತು. ಈವಾಗ ಏನಕ್ಕೆ ಬದಲಾಗಿದೆ ಅಂತ ಎಂದು ಎಂಬಿ ಪಾಟೀಲ್ ಪ್ರಶ್ನಿಸಿದರು.

ಔರಾದ್ಕರ್ ವರದಿಯಲ್ಲಿ ಕೆಲವು ತಪ್ಪಾಗಿದೆ. ಇದರಲ್ಲಿ ಹೊಸದಾಗಿ ನೇಮಕಗೊಂಡೊವರಿಗೆ ಅನ್ವಯ ಆಗುವ ರೀತಿಯಲ್ಲಿ ಮಾಡಿದ್ದಾರೆ. ಎಫ್ ಡಿ ಕಂಡಿಶನ್ ನಲ್ಲಿ ಹಾಕಿದ್ದಾರೆ, ಇದನ್ನು ತೆಗೆದು ಹಾಕಿ ಎಂದು ಗೃಹ ಸಚಿವರನ್ನು ಕೇಳಿಕೊಳ್ಳುತ್ತೇನೆ. ಹಳಬರಿಗೆ ಈಗಾಗಲೇ ನೇಮಕ ಆಗಿರುವವರಿಗೆ, ಅವರಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕು. ಅವರು ಹಬ್ಬಹರಿದಿನಗಳನ್ನು ಬಿಟ್ಟು 12 ಗಂಟೆಗಳು ಕಷ್ಟ ಪಟ್ಟು ಕೆಲಸ ಮಾಡುತ್ತಾರೆ ಅಂತವರಿಗೆ ಇದು ಸಿಗುವಂತತೆ ಆಗಬೇಕು ಎಂದು ಎಂ.ಬಿ ಪಾಟೀಲ್ ತಿಳಿಸಿದರು.

ಸಿಎಂ ಆಗುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ ಮಾಜಿ ಸಚಿವ ಎಂ.ಬಿ ಪಾಟೀಲ್…

ಇದೇ ವೇಳೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ಮಾಜಿ ಸಚಿವ ಎಂಬಿ ಪಾಟೀಲ್, ನಾನು ಸಿಎಂ ಆಗಬೇಕೆಂಬ ಆಸೆಯಿದೆ. ಆಗಲೇ ನನ್ನನ್ನ ಅಮೆರಿಕಾಗೆ ಕಳಿಸಿಬಿಟ್ರಿ. ನಾನು ಅಮೇರಿಕಾಕ್ಕೆ ಹೋಗಿ ಕ್ಯಾಬ್ ಡ್ರೈವರ್ ಆಗ್ಲಾ . ನಮ್ಮದು ಬಿಎಲ್ ಡಿಯಂತ ದೊಡ್ಡ ಸಂಸ್ಥೆಯಿದೆ. ಸಂಸ್ಥೆಯ ಅಧ್ಯಕ್ಷ ನಾನೇ ಆಗಿದ್ದೇನೆ. ಇಂತ ಸಂಸ್ಥೆ,ಆಸ್ತಿಯನ್ನೆಲ್ಲ ಬಿಟ್ಟು ನಾನು ಅಲ್ಲಿಗೆ ಹೋಗ್ಲಾ. ನನಗೆ ಇನ್ನೂ ಸಾಕಷ್ಟು ಆಸೆಗಳಿವೆ,ರಾಜಕೀಯದಲ್ಲಿ ಇದ್ದೇನೆ. ಸಿಎಂ ಆಗಬೇಕು ಎಂದು ಆಸೆ ಇದೆ, ಯಾಕ್ ನಾನ್ ಸಿಎಂ ಆಗಬಾರದು ಎಂದು ಸಿಎಂ ಆಗುವ ಆಸೆಯನ್ನ ವ್ಯಕ್ತಪಡಿಸಿದರು.

ಬಹುಕೋಟಿ ಕಣ್ವ ವಂಚನೆ ಪ್ರಕರಣ ಕುರಿತು ಮಾತನಾಡಿದ ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್,  ನಾನು ಗೃಹ ಸಚಿವನಾಗಿದ್ದಾಗ ಸಾಕಷ್ಟು ಕಂಪನಿಗಳ ಮೇಲೆ ದೂರು ಬಂದಿತ್ತು. ಐಎಂಎ ಸೇರಿದಂತೆ ಸಾಕಷ್ಟು ಕಂಪನಿಗಳ ಮೇಲೆ ದೂರು ಬಂದಿತ್ತು. ನಮ್ಮ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ಮಾಡುತ್ತಾರೆ. ಇದಕ್ಕೆ ಶಾಶ್ವತ ಪರಿಹಾರ ಸಿಗಬೇಕು. ಜನರು ಇಂತಹ ನಕಲಿ ಕಂಪನಿಗಳಿಂದ ಮೋಸ ಹೋಗುತ್ತಿದ್ದಾರೆ. ಕೇಂದ್ರ- ರಾಜ್ಯ ಸರ್ಕಾರ ಇದರ ಬಗ್ಗೆ ಕ್ರಮ ತೆಗದುಕೊಳ್ಳಬೇಕು. ಎಲ್ಲ ರಾಜ್ಯದ ಮುಖ್ಖಮಂತ್ರಿಗಳ ಸಭೆ ಕರೆದು ಚರ್ಚೆ ಮಾಡಬೇಕು ಎಂದು ಸಲಹೆ ನೀಡಿದರು.

Key words: Bangalore- MB  Patil -urged – state government – grant -permanent relief –Flood  victims.