ಭಿಕ್ಷೆ ಬೇಡಿ ಇಬ್ಬರು ಬಡ ಮಕ್ಕಳ ಸಾಧನೆಗೆ ಬೆಂಗಾವಲಾಗಿ ನಿಂತ ಮೈಸೂರಿನ ಮಂಗಳಮುಖಿ….

ಮೈಸೂರು,ನ,6,2019(www.justkannada.in):  ಇಂತಹವರನ್ನು ಕಂಡರೆ ದೂರ ಓಡುವ ಜನ, ಕೊಂಕು ಮಾತಿನಲ್ಲೆ ವ್ಯಂಗವಾಡುವ ಸಮಾಜ‌, ಇಂತಹ ಸಮಾಜ ಮದ್ಯೆ ನೋವುಗಳನ್ನು ಉಂಡು ಭಿಕ್ಷೆ ಬೇಡಿ ಜೀವನ ಸಾಗಿಸುವ ಸಾಹಸದ ಬದುಕು. ಇವುಗಳ ಮದ್ಯೆ ಸಮಾಜಕ್ಕೆ ಉತ್ತಮ ಸಂದೇಶ ಸಾರುತ್ತಿರುವ ಮೈಸೂರಿನ ಈ ಮಂಗಳಮುಖಿ ಬಡ ಮಕ್ಕಳ ಆಶಾಕಿರಣವಾಗಿದ್ದಾರೆ.

ಸಮಾಜಸೇವೆ , ಮಾನವೀಯತೆ  ಬಗ್ಗೆ ಉದ್ದುದ್ದ ಭಾಷಣ ಮಾಡುವ ಮಾತಿನ ಮಲ್ಲರಿಗೆ ಇವ್ರು ಸೆಡ್ಡು ಹೊಡೆದಿದ್ದಾರೆ. ತಂದೆ ಇಲ್ಲದ ಇಬ್ಬರು ಬಾಲಕಿಯರನ್ನು ಬಾಕ್ಸಿಂಗ್ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿ ಬಡ ಮಕ್ಕಳ ಆಶಾಕಿರಣವಾಗಿದ್ದಾರೆ ಮೈಸೂರಿನ ಅಕ್ರಂ ಅಲಿಯಾಸ್ ಮಂಗಳಮುಖಿ ಶಬಾನ.

ಹೌದು.. ಮೂಲತಹ ಮೈಸೂರಿನ ಶಬಾನ ಬಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಆದ್ರೆ ಕೇವಲ ಹೊಟ್ಟೆ ಪಾಡಿಗೆ ಭಿಕ್ಷೆ ಬೇಡದ ಇವರು ಇಬ್ಬರು ಬಡ ಮಕ್ಕಳ ಸಾಧನೆಗೆ ಬೆಂಗಾವಲಾಗಿ ನಿಂತಿದ್ದಾರೆ. ಮಂಗಳಮುಖಿ ಆಗಿದ್ದರಿಂದಲೊ ಏನೊ ಗಂಡು ಹೆಣ್ಣಿನಲ್ಲಿ ಇರಬೇಕಾದ ಮಾನವೀಯ ಗುಣ ಇವರಲ್ಲಿ ಬೆಟ್ಟದಷ್ಟಿದೆ.

ಮೈಸೂರಿನ ರಾಜೀವನಗರ ನಿವಾಸಿಯಾಗುರೊ ಇವ್ರು.ಅನಾಥ ಮಕ್ಕಳ ಬಗ್ಗೆ ವಹಿಸಿರುವ ಕಾಳಜಿ ಮೆಚ್ಚುವಂತದ್ದು. ಮಕ್ಕಳನ್ನು ಸಾಕಲು , ಶಾಲಾ ಶುಲ್ಕ ಕಟ್ಟಲು ಹಲವು ಮಕ್ಕಳಿಗೆ ಆಸರೆಯಾಗಿದ್ದಾರೆ ಹಾಗೂ ಬಾಕ್ಸಿಂಗ್ ನಲ್ಲಿ ವಿಶೇಷ ಕಲೆ ಹೊಂದಿರೊ ಮಕ್ಕಳ ಸಾಧನೆ ಹೆಗಲು ಕೊಟ್ಟು ನಿಂತಿದ್ದಾರೆ.

ಈ ಮಂಗಳಮುಖಿಯ ಸಹೋದರನ ಮಗಳು ಅಸ್ತಾಬಾನುಗೆ  ಕಳೆದ 14 ವರ್ಷಗಳ ಹಿಂದೆ ವಿವಾಹವಾಗಿತ್ತು . ನಾಲ್ಕು ಮಕ್ಕಳಾದ ನಂತರ ಆಕೆಯ ಪತಿ ಕ್ಷುಲ್ಲಕ ಕಾರಣಕ್ಕಾಗಿ ವಿಚ್ಛೇದನ ನೀಡಿ  ಸಂಸಾರದಿಂದ ದೂರವಾದ್ರು‌. ಈ ಸಂದರ್ಭದಲ್ಲಿ  ಜೀವನ ನಿರ್ವಹಣೆ ಹಾಗೂ ಮಕ್ಕಳ ಭವಿಷ್ಯ ರೂಪಿಸಲು ಚಿಂತಿಸುತ್ತಿದ್ದ ಅಸ್ತಾ ಬಾನು ನೆರವಿಗೆ ಈ ಮಂಗಳ ಮುಖಿ  ಮಕ್ಕಳ ಹೊಣೆ ಹೊತ್ತಿದ್ದಾರೆ. ನಾನು ಮಂಗಳಮುಖಿಯಾದ್ದರಿಂದ ಸಮಾಜದಲ್ಲಿ ಈ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರಬಾರದು ಅಂತ ಗಾಯತ್ರಿಪುರಂನಲ್ಲಿ ಪ್ರತ್ಯೇಕ ಬಾಡಿಗೆ ಮನೆ ಮಾಡಿ ಮಕ್ಕಳನ್ನು ಸಾಕುತ್ತಿದ್ದಾರೆ.

ಫಾತಿಮ ಹಾಗೂ ಹಾಜಿರಾ ಎಂಬ ಹೆಣ್ಣು ಮಕ್ಕಳನ್ನು ಶಾಲೆಗೆ ಸೇರಿಸಿ  ಮತ್ತದೇ ಭಿಕ್ಷೆ ಬೇಡಿ ಮಕ್ಕಳ ಶಿಕ್ಷಣವನ್ನು ಮುಂದು ವರಿಸಿದ್ದಾರೆ. ಇದೀಗ ಫಾತಿಮ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಹಾಜಿರ 6ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ . ಮಕ್ಕಳಿಗೆ ಕೇವಲ ಶಿಕ್ಷಣ ಕೊಡಿಸಿದರೆ ಸಾಲದು, ಯಾವುದಾದರೂ ಕ್ಷೇತ್ರದಲ್ಲಿ ಅವರನ್ನು ಸಾಧನೆ ಮಾಡುವಂತೆ ಮಾಡಬೇಕು ಎಂದು  ತಮಗೆ ಪರಿಚಯವಿದ್ದವರ ಸಲಹೆ ಪಡೆದು ಮಕ್ಕಳನ್ನು ಕಳೆದ 6 ತಿಂಗಳ ಹಿಂದೆ ಬಾಕ್ಸಿಂಗ್ ಶಾಲೆಗೆ ಸೇರಿಸಿದ್ದಾರೆ . ಮಕ್ಕಳು ಕೂಡ ಶ್ರದ್ದೆಯಿಂದಲೇ ಕಲಿತು ಇದೀಗ ಉತ್ತಮ ಬಾಕ್ಸಿಂಗ್ ಪಟುಗಳಾಗಿ ಹೊರಹೊಮ್ಮಿ ಇತ್ತೀಚಿಗೆ ಮೈಸೂರಿನಲ್ಲಿ ನಡೆದ ಬಾಕ್ಸಿಂಗ್ ಚಾಂಪಿಯನ್ ಭಾಗವಹಿಸಿ ಚಿನ್ನದ ಪದಕವನ್ನು ಗಳಿಸಿದ್ದಾರೆ. ಫಾತಿಮಾ ಹೊಸದಿಲ್ಲಿಯಲ್ಲಿ ನಡೆದ ಬಾಕ್ಸಿಂಗ್ ಸ್ಪರ್ಧೆಗೆ ಆಯ್ಕೆಯಾಗಿ ಚಿನ್ನದ ಪದಕ ಗಳಿಸಿದರೆ, ಹಾಜಿರಾ ಬೆಳ್ಳಿ ಪದಕವನ್ನು ಪಡೆದು ನಗೆ ಬೀರಿದ್ದಾರೆ‌‌‌.

ಮಂಗಳಮುಖಿಯರು ಜೀವನವನ್ನು ನಡೆಸುವುದೇ ಕಷ್ಟದ ಸ್ಥಿತಿ,  ಇದರ ಜೊತೆಗೆ ಮಕ್ಕಳಿಗೆ ಶಿಕ್ಷಣ ಹಾಗೂ ಬಾಕ್ಸಿಂಗ್ ಅಭ್ಯಾಸಕ್ಕೆ ಹಣ ಹೊಂದಿಸುವುದು ಅಕ್ರಂಗೆ ಕಷ್ಟದ ಕೆಲಸವಾಗಿ ಹೀಗಾಗಿ ಮಂಗಳಮುಖಿ ಅಕ್ರಂ ನೆರವಿನ ಹಸ್ತ ಚಾಚಿದ್ದಾರೆ.ಮಾನವೀಯತೆ ಮರೆಯಾಗುತ್ತಿರೊ ಸಂದರ್ಭದಲ್ಲಿ ಮುಂಗಳಮುಖಿಯ ಸಮಾಜಮುಖಿ ಕೆಲಸಕ್ಕೆ ಕೈಜೋಡಿಸಬೆಕಿದೆ.

Key words: Mysore-trans gender- achievement -two -poor children.