ಬೆಂಗಳೂರು,ಫೆಬ್ರವರಿ,2,2023(www.justkannada.in): ಪ್ರೇಮ ವೈಪಲ್ಯ ಹಿನ್ನೆಲೆ, ದಂತ ವೈದ್ಯೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ![]()
ಸಂಜಯನಗರದಲ್ಲಿ ಜನವರಿ 25 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಿಯಾಂನ್ಷಿ ತ್ರಿಪಾಠಿ ಆತ್ಮಹತ್ಯೆಗೆ ಶರಣಾದ ದಂತ ವೈದ್ಯೆ. ಉತ್ತರ ಪ್ರದೇಶ ಲಕ್ನೋ ಮೂಲದ ಪ್ರಿಯಾಂನ್ಷಿ ರಾಮಯ್ಯ ಆಸ್ಪತ್ರೆಯಲ್ಲಿ ದಂತವೈದ್ಯೆಯಾಗಿದ್ದರು.
ಈ ಮಧ್ಯೆ ವೈದ್ಯ ಸುಮಿತ್ ಎಂಬುವವರನ್ನ ಪ್ರಿಯಾಂನ್ಷಿ ಪ್ರೀತಿಸುತ್ತಿದ್ದು ಪ್ರೇಮ ವೈಪಲ್ಯ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: Bangalore-Dentist –commits- suicide.







