ಮೈಸೂರು ವಕೀಲರ ಸಂಘದ ವತಿಯಿಂದ ನೂತನ ನ್ಯಾಯಾಧೀಶ ಸಂಗ್ರೇಶಿ ಅವರಿಗೆ ಸನ್ಮಾನ.

ಮೈಸೂರು,ಫೆಬ್ರವರಿ,2,2023(www.justkannada.in): ಮೈಸೂರು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿರುವ ಸಂಗ್ರೇಶಿ ಅವರಿಗೆ ಮೈಸೂರು ವಕೀಲರ ಸಂಘದ ವತಿಯಿಂದ ಸನ್ಮಾನ ಮಾಡಲಾಯಿತು.

ನಗರದ ಹಳೆ ಕೋರ್ಟಿನ ವಕೀಲರ ಸಭಾಂಗಣದಲ್ಲಿ ಸನ್ಮಾನ ಸಮಾರಂಭ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮೈಸೂರು ವಕೀಲರ ಜಿಲ್ಲಾ ಅಧ್ಯಕ್ಷ ಮಹದೇವಸ್ವಾಮಿ, ಕಾರ್ಯದರ್ಶಿ ಉಮೇಶ್ ಸೇರಿದಂತೆ ಪದಾರ್ಥಗಳನ್ನು ಮತ್ತು ಸದಸ್ಯರು ಭಾಗಿಯಾಗಿದ್ದರು.

ಸನ್ಮಾನ ಸಮಾರಂಭ ಉದ್ದೇಶಿಸಿ ಮನದಾಳದ ಮಾತು ಹಂಚಿಕೊಂಡ ನೂತನ ನ್ಯಾಯಾಧೀಶ ಸಂಗ್ರೇಶಿ, ನನಗೆ ಮೈಸೂರು ನ್ಯಾಯಾಲಯ ಹೊಸದೇನಲ್ಲ ಮೊದಲು ಇಲ್ಲಿ ನಾನು ಸೇವೆ ಸಲ್ಲಿಸಿದ್ದೆ. 2009 ರಲ್ಲಿ ಸಿವಿಲ್ ವಿಭಾಗದ ನ್ಯಾಯಾಧೀಶನಾಗಿ ಸೇವೆ ಸಲ್ಲಿಸಿದ್ದೆ. ಅಂದು ಬಹಳ ಕಡಿಮೆ ವಕೀಲರಿದ್ದರು ಇಂದು ಈ ವಕೀಲರ ಸಂಘದಲ್ಲಿ ಸುಮಾರು 6 ಸಾವಿರ ವಕೀಲರಿದ್ದಾರೆ ಅಂತ ಗೊತ್ತಾಯಿತು. ನಾನು ನ್ಯಾಯಾಂಗ ಸೇವೆಗೆ ಸೇರಿದಾಗ ಮೈಸೂರಿನ ವಕೀಲರಿಂದಲೇ ಬಹಳಷ್ಟು ಕಲಿತಿದ್ದೇನೆ. ಅವರಿಂದ ಇಂದು ಈ ಸ್ಥಾನ ಅಲಂಕಾರಿಸಲು ಸಾಧ್ಯವಾಯಿತು. ಮತ್ತೆ ಈಗ ಪ್ರಧಾನ ನ್ಯಾಯಾಧೀಶನಾಗಿ ಬಂದಿದ್ದೇನೆ. ನಾನು  ಈ ರೀತಿಯ ಸ್ವಾಗತ ಸಿಗುತ್ತೆ ಅಂತ ನಿರೀಕ್ಷೆ ಮಾಡಿರಲಿಲ್ಲ. ನನಗೆ ಅದ್ದೂರಿಯಾಗಿ ಸ್ವಾಗತ ಕೋರಿದ್ದೀರಿ. ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ನಾನು ಮತ್ತೆ ಇಲ್ಲಿಗೆ ನ್ಯಾಯಾಧೀಶನಾಗಿ ಬಂದಿದ್ದೇನೆ ಎಂದರು.

ನಮ್ಮಲ್ಲಿ ಏನೇ ಸಮಸ್ಯೆಗಳು ಇದ್ದರೂ ಅವುಗಳನ್ನು ಒಂದೊಂದಾಗಿ ಬಗೆಹರಿಸುವ ಪ್ರಯತ್ನ ಮಾಡೋಣ. ಎಲ್ಲರು ಪ್ರೀತಿ ವಿಶ್ವಾಸದಿಂದ ಕೆಲಸ ಮಾಡಿ. ನಾವು ಮಾನವರು ಪ್ರೀತಿ ವಿಶ್ವಾಸದಿಂದ ಬದುಕಬೇಕು  ಹಣ ಅಂತಸ್ತು ಮುಖ್ಯ ಅಲ್ಲ. ಏನೇ ಸಮಸ್ಯೆ ಇದ್ದರೂ ನನ್ನನ್ನ ನೇರವಾಗಿ ಸಂಪರ್ಕಿಸಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ನಾನಿರುತ್ತೇನೆ ಎಂದು  ವಕೀಲರಿಗೆ ಕಿವಿ ಮಾತು ಹೇಳಿದರು.

Key words: New Judge- Sangreshi -honored – Mysore Bar Association.