ಕೇಂದ್ರ ಬಜೆಟ್ ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮೆಚ್ಚುಗೆ.

ಬೆಂಗಳೂರು,ಫೆಬ್ರವರಿ,2,2023(www.justkannada.in):  ನಿನ್ನೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2023-24ನೇ ಸಾಲಿನ ಬಜೆಟ್ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ, ಕೃಷಿಕರಿಗೆ 1.26 ಲಕ್ಷ ಕೋಟಿ ರೂ ಮೀಸಲಿಡಲಾಗಿದೆ.  ಕೃಷಿ ಸಾಲಕ್ಕೆ 23 ಲಕ್ಷ ಕೋಟಿ ಮೀಸಲಾಗಿದೆ. ಸಿರಿಧಾನ್ಯಕ್ಕೆ ಶ್ರಿ ಅನ್ನ ಎಂದು ಹೆಸರಿಡಲಾಗಿದೆ. ಗುಣಮಟ್ಟದ ಸಿರಿಧಾನ್ಯ ಬೆಳೆಯಬೇಕು.  ಅಂತರಾಷ್ಟ್ರೀಯ ಮಟ್ಟದಲ್ಲಿ ಹಸರುವಾಸಿಯಾಗಬೇಕು ಎಲ್ಲರೂ ಸಿರಿಧಾನ್ಯ ಬಳಸುವಂತಾಗಬೇಕು ಎಂದರು.

ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ನೀಡಲಾಗಿದ.  ಮಹಾದಾಯಿ ಡಿಪಿಆರ್ ಕ್ಲಿಯರ್ ಮಾಡಲಾಗಿದೆ ಮೀನುಗಾರಿಕೆಗೆ ವಿಶೇ಼ಷ ಪ್ರೋತ್ಸಹ ಧನ ನೀಡಲಾಗುತ್ತಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

Key words: Union Minister -Shobha Karandlaje- appreciated -Union Budget.