ಸಿಬ್ಬಂದಿಯಿಂದಲೇ  ಬೆಂಗಳೂರು ಜಲಮಂಡಳಿ ವಾಟರ್ ಬಿಲ್ ​ಗೆ ಕನ್ನ: 9 ಮಂದಿ ಬಂಧನ.

ಬೆಂಗಳೂರು,ಡಿಸೆಂಬರ್,28,2022(www.justkannada.in):   ಬೆಂಗಳೂರು ಜಲಮಂಡಳಿ(BWSSB) ವಾಟರ್ ಬಿಲ್​ ಗೆ ಸಿಬ್ಬಂದಿಯೇ ಕನ್ನ ಹಾಕಿರುವ ಘಟನೆ ನಡೆದಿದೆ.

ಗ್ರಾಹಕರು ಪಾವತಿಸಿದ್ದ ಹಣವನ್ನು ಜಲಮಂಡಳಿಗೆ ನೀಡದೆ ವಂಚನೆ ಎಸಗಿರುವ  ಆರೋಪ ಕೇಳಿ ಬಂದಿದ್ದು ಗ್ರೂಪ್ ಸಿ ಮತ್ತು ಗ್ರೂಪ್​​ ಡಿ ನೌಕರ ಸೇರಿದಂತೆ ಒಟ್ಟು 9 ಜನರನ್ನ ಬೊಮ್ಮನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.  ವರದರಾಜು, ಕಿರಣ್ ಕುಮಾರ್, ನಿರ್ಮಲ್ ಕುಮಾರ್, ಚೌಡೇಶ್, ಮಂಜುನಾಥ್, ಮಹದೇವಸ್ವಾಮಿ, ಉಮೇಶ್, ಬಸವರಾಜು ಬಂಧಿತರು.

ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ವಂಚಿಸಿದ್ದಾರೆ. 2018ರಿಂದ 2022ರವರೆಗೆ ಈ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ದೊರೆತಿದೆ.

ಒಂದೂವರೆ ಕೋಟಿ ರೂ.ಗೂ ಹೆಚ್ಚು ಹಣ ಸಂಗ್ರಹಿಸಿ ಆರೋಪಿಗಳು ವಂಚನೆ ನಡೆಸಿದ್ದಾರೆ ಎನ್ನಲಾಗಿದೆ. 850ಕ್ಕೂ ಅಧಿಕ ಗ್ರಾಹಕರಿಂದ ಬಿಲ್ ಪಡೆದು ಸರ್ಕಾರಕ್ಕೆ ಕಟ್ಟದೇ ವಂಚನೆ ಎಸಗಲಾಗಿದೆ. ಈ ಬಗ್ಗೆ ಕೋಡಿಚಿಕ್ಕನಹಳ್ಳಿ ಉಪವಿಭಾಗದ ಎಇಇ ದೂರು ನೀಡಿದ್ದು, ಬೊಮ್ಮನಹಳ್ಳಿ ಪೊಲೀಸರಿಂದ ತನಿಖೆ ಮುಂದುವರಿದಿದೆ.

Key words: Bangalore- BWSSB- water bill -theft –staff- 9 arrested