ಮೇಕೆದಾಟು ಕಾಂಗ್ರೆಸ್ ಪಾದಯಾತ್ರೆಗೆ ಫಿಲಂ ಚೇಂಬರ್ ಬೆಂಬಲ.

ಬೆಂಗಳೂರು,ಜನವರಿ,7,2022(www.justkannada.in):  ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಜನವರಿ 9ರಿಂದ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಗೆ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ನೀಡಿದೆ.

ಪಾದಯಾತ್ರೆಗೆ ಬೆಂಬಲದ ಬಗ್ಗೆ ಮಾತನಾಡಿದ ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್, ಮೇಕೆದಾಟು ಯೋಜನೆ ಹೋರಾಟ ಬೆಂಬಲಿಸೋದು ನಮ್ಮ ಹಕ್ಕು. ಪಕ್ಷಾತೀತವಾಗಿ ಹೋರಾಟವಾಗಿರುವುದರಿಂದ ಪಾದಯಾತ್ರೆಗೆ ಬೆಂಬಲಿಸುತ್ತೇವೆ ಎಂದು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ನಿರ್ಮಾಪಕ ಸಾ.ರಾ ಗೋವಿಂದು, ಮೇಕೆದಾಟು ಹೋರಾಟ ಪಕ್ಷಾತೀತವಾಗಿ ನಡೆಯಬೇಕು ಈ ಹೋರಾಟಕ್ಕೆ ಚಿತ್ರರಂಗದ ಸಂಪೂರ್ಣ ಬೆಂಬಲ ಇದೆ.   ಪರಿಸ್ಥಿತಿ ನೋಡಿ ಹೋರಾಟದಲ್ಲಿ ಭಾಗಿಯಾಗುತ್ತೇವೆ.  9 ದಿನದ ಹೋರಾಟದಲ್ಲಿ ಒಂದು ದಿನ ಭಾಗಿಯಾಗುತ್ತೇವೆ ಎಂದು ತಿಳಿಸಿದ್ದಾರೆ.

Key words: Film Chamber –support- Congress -padayatre