‘ಬಲ್ಲಹಳ್ಳಿ ವಸತಿ ಯೋಜನೆ ಕೈಬಿಡಿ’: ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ ವಿರುದ್ಧ ರೈತರಿಂದ ಪ್ರತಿಭಟನೆ…

ಮೈಸೂರು,ಅಕ್ಟೋಬರ್,8,2020(www.justkannada.in):  ಬಲ್ಲಹಳ್ಳಿ ವಸತಿ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ವಿರುದ್ಧ ಮೈಸೂರಿನಲ್ಲಿ ರೈತರ ಪ್ರತಿಭಟನೆ ನಡೆಸಿದರು.jk-logo-justkannada-logo

ಕೋರ್ಟ್ ಮುಂಭಾಗದಿಂದ ಮುಡಾವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ರಾಜ್ಯ ಸರ್ಕಾರ ಹಾಗೂ ಮುಡಾ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಲ್ಲಹಳ್ಳಿ ವಸತಿ ಯೋಜನೆಯಿಂದ ರೈತರ ಫಲವತ್ತಾದ ಭೂಮಿ ನಶಿಸಲಿದೆ. 280 ಎಕರೆ ಕೃಷಿ ಜಮೀನನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ. ಪಕ್ಕದಲ್ಲೇ ಇರುವ ರಾಜೀವ್ ಜಾಗವನ್ನು ಹೊರತು ಪಡಿಸಿ ರೈತರ ಜಮೀನನ್ನು ಮಾತ್ರ ನೋಟಿಫಿಕೇಷನ್ ಮಾಡಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಯನ್ನು ಮುಡಾ ಅಧ್ಯಕ್ಷರಾಗಿ ನೇಮಿಸಿ ಮುಡಾಗೆ ಮಸಿ ಬಳಿಯುವ ಕೆಲಸವಾಗ್ತಿದೆ ಎಂದು ಪ್ರತಿಭಟನಾನಿರತ ರೈತರು ಹೆಚ್.ವಿ ರಾಜೀವ್ ವಿರುದ್ಧ ಕಿಡಿಕಾರಿದರು.

ಪ್ರತಿಭಟನೆ ವೇಳೆ ಹೆಚ್.ವಿ.ರಾಜೀವ್ ಪ್ರತಿಕೃತಿ ಮರಕ್ಕೆ ಕಟ್ಟಿ ಅಸಮಾಧಾನ ವ್ಯಕ್ತಪಡಿಸಿದ ರೈತರು, ಹೆಚ್.ವಿ ರಾಜೀವ್ ಪ್ರತಿಕೃತಿ ದಹಿಸಲು ಹಾಗೂ ಉಗುಳುವ ಚಳುವಳಿಗೆ ಯತ್ನಿಸಿದರು. ಈ ವೇಳೆ ತಡೆದ ಪೊಲೀಸರ ಜತೆ ರೈತರು ಮಾತಿನ ಚಕಮಕಿ ನಡೆಸಿದರು.  ನಂತರ ಪೊಲೀಸರು ರಾಜೀವ್ ಅವರ ಪ್ರತಿಕೃತಿ ವಶಕ್ಕೆ ಪಡೆದರು.

Key words: Ballahalli Housing Scheme -Farmers -protest -against -Muda president -HV Rajeev