ರೈಲ್ವೆ ಬೋಗಿಗಳ ಮೇಲೂ ಮೂಡಿದ ‘ಅವನೇ ಶ್ರೀಮನ್‌ ನಾರಾಯಣ’

ಬೆಂಗಳೂರು, ಡಿಸೆಂಬರ್ 17, 2019 (www.justkannada.in): ಅವನೇ ಶ್ರೀಮನ್‌ ನಾರಾಯಣ ಚಿತ್ರದ ಪ್ರಮೋಷನ್‌ ವರ್ಕ್‌ ಶುರುವಾಗಿದೆ.

ಬಹುತೇಕ ಎಲ್ಲಾ ಕಡೆ ಅವನೇ ಶ್ರೀಮನ್‌ ನಾರಾಯಣ ಸಿನಿಮಾದ ಪೋಸ್ಟರ್‌ಗಳು ಕಾಣಸಿಗುತ್ತಿದ್ದು, ಈಗ ಟ್ರೈನ್‌ನಲ್ಲೂ ಅವನೇ ಶ್ರೀಮನ್‌ ನಾರಾಯಣ ಸ್ಟರ್‌ ರಾರಾಜಿಸುತ್ತಿವೆ.

ಮೈಸೂರು -ಯಶವಂತಪುರ ಟ್ರೈನಿನಲ್ಲಿ ಚಿತ್ರದ ಪೋಸ್ಟರ್‌ಗಳನ್ನು ಭೋಗಿಗಳಿಗೆ ಹಾಕುವುದರ ಮೂಲಕ ಚಿತ್ರದ ಪ್ರಮೋಷನ್‌ನಲ್ಲಿ ತೊಡಗಿಕೊಂಡಿರೋ ಚಿತ್ರತಂಡ, ನೀವೂ ಸಂಚರಿಸುವ ಅನೇಕ ಟ್ರೈನ್‌ಗಳಲ್ಲೂ ಈ ಶ್ರೀಮನ್‌ ನಾರಾಯಣ ಚಿತ್ರದ ಪೋಸ್ಟರ್‌ಗಳನ್ನು ಕಾಣಬಹುದಾಗಿದೆ.