ರಾಜ್ಯದಲ್ಲಿರುವವರು ಇಬ್ಬರೇ ಸತ್ಯಹರಿಶ್ಚಂದ್ರ, ಒಬ್ಬರು ಎಚ್.ಡಿ.ಕೆ, ಇನ್ನೊಬ್ಬರು ಬೊಮ್ಮಾಯಿ: ಎಚ್.ವಿಶ್ವನಾಥ್ ವ್ಯಂಗ್ಯ

ಮೈಸೂರು, ಆಗಸ್ಟ್ 05, 2023 (www.justkannada.in): ಸತ್ಯಹರಿಶ್ಚಂದ್ರ ಸತ್ತ ಮೇಲೆ ರಾಜ್ಯದಲ್ಲಿ ಇಬ್ಬರೇ ಸತ್ಯಹರಿಶ್ಚಂದ್ರರು ಇರೋದು. ಒಬ್ಬರು ಎಚ್.ಡಿ. ಕುಮಾರಸ್ವಾಮಿ, ಇನ್ನೊಬ್ಬರು ಬಸವರಾಜ ಬೊಮ್ಮಾಯಿ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ವ್ಯಂಗ್ಯವಾಡಿದರು.

ನಗರದಲ್ಲಿ ಮಾತನಾಡಿದ ಅವರು, ಇಬ್ಬರೂ ಮುಖ್ಯಮಂತ್ರಿ ಆಗಿದ್ದವರು.  ಆಗ ಮಾಡಿದ ಅಧ್ವಾನಗಳನ್ನು ಜನ ಈಗಲೂ ಅನುಭವಿಸುತ್ತುದ್ದಾರೆ ಎಂದು ಲೇವಡಿ ಮಾಡಿದರು.

ಕುಮಾರಸ್ವಾಮಿ ಅವರೇ ಆ ಪೆನ್ ಡ್ರೈವ್ ಏನಾಯ್ತು ? ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಬೇಡಿ. ಏನೇನೋ ಆರೋಪ ಮಾಡುತ್ತೀರಿ ? ಆದರೆ ಯಾವುದನ್ನು ಸಾಬೀತು ಮಾಡಿದ್ದೀರಿ ? ನೀವು ಮುಖ್ಯಮಂತ್ರಿ ಆಗಿದ್ದವರು. ಮಾತಿನಿಂದ ನಿಮ್ಮ ಘನತೆ ಕಡಿಮೆ ಆಗುತ್ತಿದೆ ಎಂದು ಮೈಸೂರಿನಲ್ಲಿ ಎಚ್.ವಿಶ್ವನಾಥ್ ಹೇಳಿದರು.