ಶಾಲೆಯಿಂದ ವಿಮುಖರಾದ ಮಕ್ಕಳನ್ನ ಮತ್ತೆ ಶಾಲೆಗೆ ಕರೆತರುವ ಪ್ರಯತ್ನ- ಶಿಕ್ಷಣ ಸಚಿವ ಬಿಸಿ ನಾಗೇಶ್.

ಬೆಂಗಳೂರು,ಅಕ್ಟೋಬರ್,22,2021(www.justkannada.in): ಗದಗ ಸೇರಿ ಕೆಲವು ಕಡೆ ಮಕ್ಕಳನ್ನ ಕೆಲಸಕ್ಕೆ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಕೆಲವು ಕಡೆ ಅಂತಹ ಸನ್ನಿವೇಶ ಇದೆ. ಮಕ್ಕಳನ್ನ ಕರೆತರುವ ಕೆಲಸ ಮಾಡ್ತಿದ್ದೇವೆ. ಯಾವ ಮಕ್ಕಳು ಮಿಸ್ ಆಗದಂತೆ ನೋಡಿಕೊಳ್ತೇವೆ. ಶಾಲೆಯಿಂದ ವಿಮುಖರಾಗದಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಸಚಿವ ಬಿ.ಸಿ ನಾಗೇಶ್, 125 ಮಕ್ಕಳು ಶಾಲೆಯಿಂದ ವಿಮುಖರಾಗಿದ್ದಾರೆ. ಅವರನ್ನ ಮತ್ತೆ ಶಾಲೆಗೆ ಕರೆತರುವ ಪ್ರಯತ್ನ ನಡೆದಿದೆ. ಶಾಲೆಯಿಂದ ವಿಮುಖರಾದ ಮಕ್ಕಳನ್ನ ಮತ್ತೆ ಶಾಲೆಗೆ ಕರೆತರುವ ಪ್ರಯತ್ನಿಸುತ್ತೇವೆ ಎಂದರು.

ಮಕ್ಕಳ ಕಲಿಕೆಗೆ ಮೂರು  ಸಂಚಾರಿ ಬಸ್ ಶಾಲೆ ನೀಡಲಾಗಿತ್ತಿದೆ. ಸೇವ್ ದ ಚಿಲ್ಡ್ರನ್ ಸಂಸ್ಥೆಯ  ವತಿಯಿಂದ ಈ ಸೇವೆ ಲಭ್ಯವಿದೆ. ಚಿಂದಿ ಆಯುವ ಮಕ್ಕಳಿಗೆ ಶಿಕ್ಷಣ ಸಿಗಬೇಕು. ಸಂಚಾರಿ ಕಲಿಕಾ ಕೇಂದ್ರ ಬಸ್ಸಿನಲ್ಲಿ ವ್ಯವಸ್ಥೆಯಿದೆ. ಪುಸ್ತಕ, ಆಟದ ಸಾಮಾಗ್ರಿ, ಟಿವಿ ಒಳಗೊಂಡಿದೆ. ಡಿಜಿಟಲ್ ರೂಪದ ಕಲಿಕಾ ಸಾಮಗ್ರಿ ಹೊಂದಿದೆ. ನಗರದಲ್ಲಿ 3 ಸಂಚಾರಿ ಬಸ್ ಸೇವೆಗೆ ಸಿಗಲಿದೆ. ಪ್ರತಿದಿನ ನಗರದ 30 ಬೇರೆಬೇರೆ ಪ್ರದೇಶಗಳಲ್ಲಿ ಕಲಿಕೆ ನೀಡಲಾಗುತ್ತದೆ. ಬಸ್ ಶಾಲೆಯಲ್ಲಿ ‌ಮಕ್ಕಳಿಗೆ ಕಲಿಸಲಾಗುವುದು. ಸಂಚಾರಿ ಶಾಲೆಯಲ್ಲಿ ಶಿಕ್ಷಕರ ನೇಮಕ ಮಾಡಲಾಗುವುದು. ಐದು ಭಾಷೆಯಲ್ಲಿ ಕಲಿಕಾ ವ್ಯವಸ್ಥೆ ಮಾಡಲಾಗಿದೆ ಎಂದರು.

ಅಕ್ಟೋಬರ್ 25 ರಿಂದ ಶಾಲೆಗಳ ಆರಂಭವಾಗ್ತಿದೆ. ಪ್ರಾರಂಭಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಶಾಲೆಗಳು ಸಿದ್ಧತೆ ಮಾಡಿಕೊಂಡಿವೆನಾವು ಮಾಡಿದ ಎಲ್ಲದರಲ್ಲೂ ಸಕ್ಸಸ್ ಆಗಿದ್ದೇವೆ. ಇದರಲ್ಲೂ ನಾವು ಸಕ್ಸಸ್ ಆಗ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಬಿಸಿಯೂಟದಲ್ಲಿ 70% ಸಕ್ಸಸ್ ಆಗಿದ್ದೇವೆ. ಮಕ್ಕಳನ್ನು ಕಳುಹಿಸುವುದಕ್ಕೆ ಪೋಷಕರ ಗೊಂದಲವಿಲ್ಲ. ಹಳ್ಳಿಗಳಲ್ಲಿ ಬಸ್ ಸೌಲಭ್ಯದ ಸಮಸ್ಯೆ ಇದೆ. ಬಸ್ ಸೌಲಭ್ಯ ಇಲ್ಲದ‌ ಕಡೆ ತೊಂದರೆಯಾಗುತ್ತಿದೆ. ಅಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದರು.

ಶಾಲೆಗಳಲ್ಲಿ ಶಿಕ್ಷಕರ ಕೊರತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಬಿಸಿ ನಾಗೇಶ್, 6ರಿಂದ 8ನೇ ತರಗತಿ ಶಿಕ್ಷಕರ ಕೊರತೆಯಿದೆ. ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ತೇವೆ. ಪ್ರಾಥಮಿಕ ಶಾಲೆಗಳ ಶಿಕ್ಷಕರ ಕೊರತೆಯಿಲ್ಲ. ಎಲ್ ಕೆಜಿ, ಯುಕೆಜಿ ಆರಂಭದ ಬಗ್ಗೆ ಮುಂದೆ ನಿರ್ಧಿರಿಸುತ್ತೇವೆ ಎಂದರು.

Key words: Attempt -bring – children – school- Education Minister- BC Nagesh